

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ವತಿಯಿಂದ ನೀಡಲಾಗುವ 2023ನೇ ಸಾಲಿನ ‘ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿ’ಗೆ ಡಾ. ಮೋಹನ ಕುಂಟಾರ್ ಮತ್ತು ‘ಡಾ. ವಿಜಯಾ ಸುಬ್ಬರಾಜ್ ಸುಬ್ಬರಾಜ್ ಗಣ್ಯಲೇಖಕಿ ಪ್ರಶಸ್ತಿ’ಗೆ ಟಿ.ಎಸ್. ಶ್ರವಣಕುಮಾರಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ತಲಾ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದ್ದು, ಏ. 13ರಂದು ನಡೆಯುವ ಸಮಾರಂಭದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಎಲ್.ಜಿ. ಮೀರಾ, ಡಾ. ಎಲ್. ಸಿ. ರಾಜು, ಡಾ. ಡಿ. ಭರತ್ ಮತ್ತು ಡಾ. ಸತ್ಯಮಂಗಲ ಮಹಾದೇವ ಆಯ್ಕೆ ಸಮಿತಿಯಲ್ಲಿದ್ದರು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.