ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ

20231003_110323
Published on

ವಿಟ್ಲ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಭಾರತೀಯ ಮಜ್ದೂರ್ ಸಂಘ ವಿಟ್ಲ ತಾಲೂಕು ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿಟ್ಲ ನಾಡಕಛೇರಿಯವರೆಗೆ ಕಾಲುನಡಿಗೆ ಜಾಥಾ ನಡೆಸಿದರು.ಬಿ.ಎಂ.ಎಸ್. ನಿಕಟಪೂರ್ವ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ವಿಟ್ಲ ಘಟಕ ಅಧ್ಯಕ್ಷ ನಾಗೇಶ್ ಸುವರ್ಣ, ಉಪಾಧ್ಯಕ್ಷ ಜಗದೀಶ್ ಅನ್ನಮೂಲೆ, ಕಾರ್ಯದರ್ಶಿ ಸಂತೋಷ್ ಕೆಲಿಂಜ, ಜತೆ ಕಾರ್ಯದರ್ಶಿ ಯಶೋಧರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net