

ಬೆಳಗಾವಿ : ಇಲ್ಲಿನ ವೈದ್ಯಕೀಯ ಸಂಶೋಧನಾ ಸಂಸ್ಥೆ ( ಬಿಮ್ಸ್) ಆಸ್ಪತ್ರೆಯ ಆವರಣದಲ್ಲಿರುವ ವಸತಿ ನಿಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರು ಮೂಲದ ಪ್ರೀಯಾ (27) ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪಿಜಿ ವೈದ್ಯೆ. ಎಪಿಎಂಸಿ ಠಾಣೆ ಯಲ್ಲಿಪ್ರಕರಣ ದಾಖಲಾಗಿದೆ.
ರೋಗಿಗಳ ತಪಾಸಣೆ ಕುರಿತು ಅಧ್ಯಯನ ಮಾಡಿದ್ದ ಪ್ರೀಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಹಿಂದೆ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆ ಬೆಂಗಳೂರು ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ಆತ್ಮಹತ್ಯೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ ಎಂದು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ತಿಳಿಸಿದ್ದಾರೆ.