ಕಾಸರಕೋಡು ಕಡಲ ತೀರಕ್ಕೆ ಮೂರನೇ ಬಾರಿ ಬ್ಲೂ ಫ್ಲ್ಯಾಗ್ ಗರಿ

IMG-20221018-WA0021.jpg
Published on

ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡಿನ‌ ಇಕೊ ಬೀಚ್ ಗೆ ಸತತ ಮೂರನೇ ಬಾರಿಗೆ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ ಲಭಿಸಿದೆ.


ಡೆನ್ಮಾರ್ಕ್ ನ ಫೌಂಡೇಷನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ಎಂಬ ಸಂಸ್ಥೆಯು ವಿಶ್ವದ ಕಡಲ ತೀರಗಳಲ್ಲಿ, ಸ್ವಚ್ಛತೆ, ಪರಿಸರ ಸ್ನೇಹಿ ವಾತಾವರಣ ಸೇರಿ 33 ಅಂಶಗಳನ್ನು ಗಮನಿಸಿ ಈ ಪ್ರಮಾಣಪತ್ರ ನೀಡಲಿದೆ. ಪ್ರತಿ ವರ್ಷ ಸಂಸ್ಥೆಯ ಪ್ರತಿನಿಧಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಮಾಣಪತ್ರ ನವೀಕರಿಸುವರು.


ದೇಶದಲ್ಲಿ ವಿಶ್ವ ದರ್ಜೆಯ ಈ ಪ್ರಮಾಣಪತ್ರ ಪಡೆದ ಕೆಲವೇ ಕಡಲ ತೀರಗಳಿದ್ದು, ಕರ್ನಾಟಕದಲ್ಲಿ ಪಡುಬಿದ್ರಿ ಹಾಗೂ ಕಾಸರಕೋಡು ಕಡಲ ತೀರಗಳಿಗೆ ಮಾತ್ರ ಈ ಪ್ರಮಾಣಪತ್ರವಿದೆ.
ಹೊನ್ನಾವರ ಕಾಸರಕೋಡು ಬಂದರು ನಿರ್ಮಾಣ ವಿಷಯದಲ್ಲಿ ವಿವಾದ ಉಂಟಾಗಿರುವ ಕಾರಣ ಈ ಬಾರಿ ಬ್ಲ್ಯೂ ಫ್ಲ್ಯಾಗ್ ನವೀಕರಣ ಕಷ್ಟ ಎಂಬ ಮಾತು ಕೇಳಿ ಬಂದಿತ್ತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಡಿಡಿ ಜೆ. ಜಯಂತ್ ಪ್ರಮಾಣಪತ್ರ ನವೀಕರಣಕ್ಕೆ ಕಾಳಜಿ ವಹಿಸಿದ್ದರು. ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ ದೊರೆತ ನಂತರ ಕಾಸರಕೋಡು ತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ. ಕಡಲ‌ ತೀರವನ್ನು ಇನ್ನಷ್ಟು ಪ್ರಸಿದ್ದಪಡಿಸಲು ಅ.28 ರಂದು ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಯಂತ್ 'ವಿಜಯವಾಣಿಗೆ' ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net