ಜ್ಞಾನದಿಂದ ಸೇವೆ, ಸೇವೆಯಿಂದ ಸಂಸ್ಕಾರ: ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ

IMG-20241113-WA0034.jpg
Published on

ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ ಎನ್. ಎಸ್. ಎಸ್. ಕೋಶ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಉದ್ಯೋಗಾಧಾರಿತ ಕೌಶಲ್ಯ ನಿರ್ಮಿಸುವ ಜವಾಬ್ದಾರಿ ಹೊಂದಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ಬುಧವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆ ಕೋಶ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ೨೦೨೪-೨೫ನೇ ಸಾಲಿನ ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಸ್ವಾಭಿಮಾನಿ, ಜ್ಞಾನವಂತ ಹಾಗೂ ಸೇವಾ ಮನೋಭಾವಿಯನ್ನಾಗಿ ಮಾಡಬೇಕಾಗಿದೆ. ಸೇವೆ ಮಾಡುವವರಿಗೆ ಬಡತನದ ಭ್ರಮೆ ಇರುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾ.ಸೇ.ಯೋ. ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಮಾತನಾಡಿ, ಎನ್. ಎಸ್. ಎಸ್. ನೊಂದಿಗೆ ಗುರುತಿಸಿಕೊಳ್ಳುವ ವ್ಯಕ್ತಿ ಜೀವನಪರ್ಯಂತ ರಾಷ್ಟಿçÃಯ ಸೇವೆ ಮಾಡುವ ಮನೋವೃತ್ತಿಯನ್ನು ಹೊಂದಿರುತ್ತಾರೆ. ಇದು ವ್ಯಕ್ತಿಯಲ್ಲಿ ನೈತಿಕ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುತ್ತದೆ ಎಂದರು.

ಡಾ. ಕನಕಪ್ಪ ಪೂಜಾರ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಅತ್ಯುತ್ತಮ ನಾಗರಿಕರಾಗಲು ಎನ್.ಎಸ್.ಎಸ್. ಸಹಕಾರಿ ಎಂದು ನುಡಿದರು.

ಅಥಣಿಯ ಎಸ್. ಎಸ್. ಎಮ್. ಎಸ್. ಮಹಾವಿದ್ಯಾಲಯ ಹಾಗೂ ತಾಳಿಕೋಟಿಯ ಎಸ್. ಕೆ. ಮಹಾವಿದ್ಯಾಲಯಗಳು ಅತ್ಯುತ್ತಮ ಘಟಕ, ಶ್ರೀ ಪ್ರಕಾಶ ಕುರುಪಿ (ಎಸ್. ಎ. ಕಾಲೇಜು ಅಂಕಲಗಿ) ಹಾಗೂ ಶ್ರೀ ರಮೇಶ ಜಾಧವ (ಎಸ್.ಕೆ ಕಾಲೇಜು ತಾಳಿಕೋಟಿ) ಅತ್ಯುತ್ತಮ ಅಧಿಕಾರಿ ಮತ್ತು ಮಹಮ್ಮದ್ ಪಟೇಲ್, ಧನಶ್ರೀ ಉತ್ತಮ ಶಿಂದೆ, ಅರ್ಚನಾ ವಾಘಮೋರೆ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಪಡೆದರು. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಉಷಾ ಹರಗಾಪುರೆ, ಮಾನಸಿ ಮೆಳಗೆ, ಜ್ಯೋತಿ ಮಾಧವ, ಪೂಜಾ ಕಾಮನ್ನವರ, ಜಾಂಭವAತ ಚವ್ಹಾಣ, ಗಣೇಶ ಹೊಸಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕೋಡಿ ವಿಭಾಗದ ಪ್ರಭಾರಿ ಸಂಯೋಜನಾಧಿಕಾರಿ ಶಂಕರ ನಿಂಗನೂರ, ಖಾನಾಪೂರ ತಾಲ್ಲೂಕ ಪ್ರಭಾರಿ ಸಂಯೋಜನಾಧಿಕಾರಿ ಯಲ್ಲಪ್ಪ ದಬಾಲಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಕಾರ್ಯಕ್ರಮಾಧಿಗಳು, ಸ್ವಯಂಸೇವಕರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಕು. ಅಪೇಕ್ಷಾ ಪ್ರಾರ್ಥಿಸಿದರು, ಅಂಬಿಕಾ ಹಾಗೂ ಸಂಗಡಿಗರು ಎಸ್. ಎಸ್. ಎಸ್. ಗೀತೆ ಹಾಡಿದರು, ಡಾ. ಸಂಜೀವ ತಳವಾರ ಸ್ವಾಗತಿಸಿದರು. ಡಾ. ಅಶ್ವಿನಿ ಜಾಮುನಿ ನಿರೂಪಿಸಿದರು. ಡಾ. ಪ್ರಕಾಶ ರಾಠೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net