ಶ್ರದ್ಧೆಯಿಂದ ಕೆಲಸ ಮಾಡಿದರೆ ಸಾರ್ಥಕತೆ ಲಭ್ಯ

21blrp2
Published on

* ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಅಭಿಮತ

* ಬೀಳ್ಕೊಡುಗೆ ಸಮಾರಂಭ

ವಿಜಯವಾಣಿ ಸುದ್ದಿಜಾಲ ಬೇಲೂರು

ಶ್ರದ್ಧೆಯಿಂದ ಕೆಲಸ ಮಾಡಿದರೆ ಸಾರ್ಥಕತೆ ಲಭ್ಯ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳ ಸಂಘದಿಂದ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹಾಸನ ಜಿಲ್ಲೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಯಾವುದೇ ಇಲಾಖೆಯಲ್ಲಿದ್ದರೂ ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಶಿಸ್ತುಬದ್ಧ ಕೆಲಸ ಎಂದರೆ ನನಗೆ ಇಷ್ಟ ಎಂದರು.

ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭ ಹೆಲಿಕಾಪ್ಟರ್‌ನಿಂದ ಜಿಲ್ಲಾ ದರ್ಶನ ಮಾಡಿಸುವ ಉದ್ದೇಶ ಇತ್ತು. ಇದು ಕಡೆಯ ಹಂತದಲ್ಲಿ ಸಾಧ್ಯವಾಗಲಿಲ್ಲ. ಆದರೂ ಮೈಸೂರಿನಿಂದ ಡಬಲ್ ಡೆಕ್ಕರ್ ಬಸ್ ಕರೆಸಿ ಹಾಸನ ನಗರ ದರ್ಶನವನ್ನು ಪ್ರವಾಸಿಗರಿಗೆ ಮಾಡಿಸಲಾಯಿತು.

ಪ್ರವಾಸಿ ಮಾರ್ಗದರ್ಶಿಗಳಿಗೆ ಇಲಾಖೆಯಿಂದ ಸಮವಸ್ತ್ರ ಮತ್ತು ಪುನಶ್ಚೇತನ ತರಬೇತಿ ನೀಡಲಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಜ್ಞಾನಾರ್ಜನೆ ಲಭ್ಯವಾಗುವಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಬೇಲೂರಿನಲ್ಲಿ ಫುಡ್ ಕೋರ್ಟ್ ಮಾಡಬೇಕೆಂಬ ಯೋಜನೆ ಹಾಕಿಕೊಂಡಿದ್ದೆ. ಆದರೆ ಸರಿಯಾದ ಸಹಕಾರ ದೊರಕಲಿಲ್ಲ. ದೇವಾಲಯದ ಹಿಂಭಾಗ ಇಲಾಖೆಯ ಜಾಗದಲ್ಲಿ ಹೈಟೆಕ್ ಹೋಟೆಲ್, ಶೌಚಗೃಹ ನಿರ್ಮಿಸಿ, ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಯೋಜನೆ ರೂಪಿಸಿದ್ದೆ. ಅದೂ ಸಾಧ್ಯವಾಗಲಿಲ್ಲ. ಮುಂದೆ ಬರುವ ಅಧಿಕಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಬೇಲೂರು ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ತಾರಾನಾಥ್, ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಸಂಚಾಲಕ ಅಮರೇಶ. ಶಿಸ್ತು ಸಮಿತಿ ಅಧ್ಯಕ್ಷ ತಾರಾನಾಥ, ಪದಾಧಿಕಾರಿಗಳಾದ ಸತ್ಯನಾರಾಯಣ ಗುಪ್ತ, ರಾಮಚಂದ್ರ ಹೆಗಡೆ. ಶರೀಫ್. ರಾಘವೇಂದ್ರ. ಮುರಳಿ, ಮಂಜುನಾಥ್. ವೆಂಕಟೇಶ್, ಸುಧೀಂದ್ರ, ಧರ್ಮೇಂದ್ರ, ನಾರಾಯಣ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net