ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ

27blrp2
Published on

ಬೇಲೂರು : ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ತಾಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಆವರಣದ ಗಣಪತಿ ದೇಗುಲದ ಮುಂಭಾಗ ಶನಿವಾರ ರಾತ್ರಿ ಮೇಣದ ಬತ್ತಿಗಳನ್ನು ಹಚ್ಚಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಎಸ್.ಎಂ.ರಾಜು, ಗಡಿಯಲ್ಲಿ ಸೈನಿಕರು ತಮ್ಮ ಜೀವ ಪಣಕ್ಕೆ ಇಟ್ಟು ದೇಶ ಸೇವೆ ಮಾಡುತ್ತಿರುವುದರಿಂದಲೇ ದೇಶದೊಳಗಿರುವ ನಾವು ಸುರಕ್ಷಿತವಾಗಿದ್ದೇವೆ. 26 ವರ್ಷಗಳ ಹಿಂದೆ ಭಾರತ-ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ

ನಮ್ಮ ಸೈನಿಕರು ಆಕ್ರಮಿತ ಪರ್ವತವನ್ನು ವಶಕ್ಕೆ ಪಡೆದು ವಿಜಯ ಪತಾಕೆ ಹಾರಿಸಿದರು. ಈ ಸಂದರ್ಭ

ನಮ್ಮ 527 ಸೈನಿಕರು ಹುತಾತ್ಮರಾದರೂ ಭಾರತಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟರು. ಇದೊಂದು ಅವಿಸ್ಮರಣೀಯ ಘಟನೆ ಎಂದು ಅವರು ಹೆಳಿದರು.

ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್, ತಾಲೂಕು ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹೇಮಂತ್, ಮುಖಂಡರಾದ ಸತೀಶ್, ಬೆಟ್ಟ, ವಿನೋದ, ಪೊಲೀಸ್ ಸಿಬ್ಬಂದಿ ಮೋಹನ್ ಕುಮಾರ್, ಗೃಹ ರಕ್ಷಕ ದಳದ ಭದ್ರಯ್ಯ, ಶಿವಯ್ಯ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net