ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅಧಿಕಾರ ಸ್ವೀಕಾರ

2blrp2
Published on

ಬೇಲೂರು : ಬೇಲೂರು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ಗೆ ನೂತನವಾಗಿ ಅದ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಪೇಂಟ್ ರವಿ ಹಾಗೂ ಕೊರಟಿಗೆರೆ ಸತೀಶ್ ಬುಧವಾರ ನಿರ್ದೇಶಕಕರ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ  ಮಾತನಾಡಿದ ಅವರು, ಬೇಲೂರು ಪಟ್ಟಣದ ಅರ್ಬನ್ ಬ್ಯಾಂಕ್ ಪ್ರತಿಷ್ಟಿತ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಈ ಬ್ಯಾಂಕಿನ ಅಭಿವೃದ್ಧಿಗೆ ಷೇರುದಾರರು, ನಿರ್ದೇಶಕರು ಸೇರಿದಂತೆ ಸಿಬ್ಬಂದಿ ಸಹಕಾರದೊಂದಿಗೆ ಶ್ರಮಿಸಲಾಗುವುದು ಎಂದರು. ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಕೊರಟಗೆರೆ ಸತೀಶ್, ನಿರ್ದೇಶಕರಾದ ಬಿ.ಎಂ.ಪ್ರಸನ್ನ, ಬಿ.ಬಿ.ಶಿವರಾಜ್, ಎಸ್.ಕೆ.ನಾಗೇಶ್, ಬಿ.ಎಲ್.ಲಕ್ಷ್ಮಣ್. ಎಂ.ಪಿ.ತಾರಾನಾಥ್, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರಾಜು. ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ್‌ಗೌಡ. ಮಿಮಿಕ್ರಿ ರಾಮು. ಗುತ್ತಿಗೆದಾರ ಸತೀಶ್. ಮುಖಂಡರಾದ ಬಸವರಾಜು. ಕರವೇ ವೆಂಕಟೇಶ್. ಖಾದರ್. ಮೋಹನ್. ವ್ಯವಸ್ಥಾಪಕ ಶಿವಶಂಕರ್, ಸಿಬ್ಬಂದಿ ತೀರ್ಥಕುಮಾರ್, ಸುರೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net