

ಹುಬ್ಬಳ್ಳಿ: ಹುಬ್ಬಳ್ಳಿ ಬ್ಲೂಮರ್ಸ್ ಗ್ರುಪ್ ವತಿಯಿಂದ 12ನೇ ಆವೃತ್ತಿಯ ರಾಜಸ್ಥಾನ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ಡಿಸೆಂಬರ್ 17ರಿಂದ 20ರವರೆಗೆ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ 12 ತಂಡಗಳು ಸೆಣಸಲಿವೆ. ಕುಸುಗಲ್ ರಸ್ತೆಯ ಹುಬ್ಬಳ್ಳಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು. ಒಟ್ಟು 160 ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಲಾಯಿತು.
ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾದ ರುದ್ರಾಕ್ಷ ಮಾರ್ಕೆಟಿಂಗ್ನ ರಾಜುಭಾಯಿ ದವೆ ಉಪಸ್ಥಿತರಿದ್ದರು.
ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ವೀರೇಂದ್ರ ದಾಮ್ಜಿ ಛೇಡಾ, ಸುರೇಶ ಸಿ.ಜೈನ್(ಲಕ್ಕಿ), ಉದ್ಯಮಿ ಸಂತೋಷ ಬನ್ಸಾಲಿ ಪಾಲ್ಗೊಂಡಿದ್ದರು. ಬ್ಲೂಮರ್ಸ್ ಗ್ರುಪ್ನ ಪ್ರಕಾಶ ಕಟಾರಿಯಾ, ವಿಕ್ರಮ ಪೋಮಾನಿ, ಮನೀಶ ಕೊಠಾರಿ, ದಿನೇಶ ರಾಥೋಡ, ಮಾನಕ್ಷಾ ರಾಜಪುರೋಹಿತ, ಹರೀಶ ರಾಜಪುರೋಹಿತ, ಇತರರು ಇದ್ದರು.