ರಕ್ತರಹಿತ ಚಳವಳಿ ಮಾದರಿ

CLK JAYANTI 02
Published on

ಚಳ್ಳಕೆರೆ: ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಬಹುದೊಡ್ಡ ಗೆಲುವು ಸಾಧಿಸಬಹುದು ಎಂಬುದನ್ನು ಗಾಂಧೀಜಿ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು ದಶಕಗಳ ಕಾಲ ಬ್ರಿಟಿಷರ ವಿರುದ್ಧ ಚಳುವಳಿ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನೇತಾರ ಗಾಂಧೀಜಿ ನಮ್ಮೆಲ್ಲರಿಗೂ ಆದರ್ಶ ಎಂದರು.

ತಹಸೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತವಾಗಿಸುವ ಮೂಲಕ ಸಮಾನತೆಯ ಪ್ರತಿಪಾದಿಸಿದ ಗಾಂಧೀಜಿ, ಜೈ ಜವಾನ್ ಜೈ ಕಿಸಾನ್ ಎನ್ನುವ ಆದರ್ಶ ಮಾರ್ಗದಲ್ಲಿ ದೇಶದ ಹಿತ ಬಯಸಿದ ಶಾಸ್ತ್ರಿ ಅವರ ಬದುಕು ಸಮಾಜಕ್ಕೆ ಆದರ್ಶವಾಗಿದೆ ಎಂದು ಹೇಳಿದರು.

ಪ್ರೊ.ಟಿ.ನಾಗರಾಜು ಮಾತನಾಡಿ, ಬುದ್ಧನಿಂದ ಹುಟ್ಟಿಕೊಂಡ ಅಹಿಂಸಾ ಮಾರ್ಗವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಗಾಂಧೀಜಿ ಮಹಾತ್ಮರಾಗಿ ಉಳಿದುಕೊಂಡಿದ್ದಾರೆ ಎಂದರು.

ಕ್ವಿಟ್ ಇಂಡಿಯಾ ಚಳುವಳಿ ದಾಖಲೆಯಿಂದ ವಿಶ್ವಸಂಸ್ಥೆ ಅ.2ರ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದ್ದು, ಇದು ಗಾಂಧೀಜಿ ಮೂಲಕ ಭಾರತಕ್ಕೆ ವಿಶ್ವ ಸಲ್ಲಿಸುತ್ತಿರುವ ಗೌರವ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ನಗರಸಭಾ ಸದಸ್ಯೆ ಸುಜಾತಾ ಪಾಲಯ್ಯ, ಪೌರಾಯುಕ್ತ ಸಿ.ಚಂದ್ರಪ್ಪ, ಬಿಇಒ ಕೆ.ಎಸ್.ಸುರೇಶ್, ಸಮಾಜ ಕಲ್ಯಾಣ ಇಲಾಖೆ ಮಂಜಣ್ಣ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ, ಡಾ.ಟಿ.ಎಸ್.ರೇವಣ್ಣ, ಜೆ.ಅಶೋಕ್, ಡಾ.ಆರ್.ವಿರೂಪಾಕ್ಷಪ್ಪ, ದಿವಾಕರ, ಶಿವಸ್ವಾಮಿ, ಲಿಂಗೇಗೌಡ, ಪ್ರಕಾಶ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net