

ಯಲಬುರ್ಗಾ: ಗರ್ಭಿಣಿ, ಬಾಣಂತಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಲಲಿತಾ ನಾಯಕ ಹೇಳಿದರು.
ಇದನ್ನೂ ಓದಿ: ಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸಲಿ
ತಾಲೂಕಿನ ತಾಳಕೇರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭಿಣಿಯರ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗರ್ಭಿಣಿ, ಬಾಣಂತಿಯರು ಮತ್ತು ಶಿಶು, ಮಕ್ಕಳಲ್ಲಿನ ರಕ್ತಹೀನತೆ, ಅಪೌಷ್ಟಿಕತೆ ತೊಲಗಿಸಲು ಆರೋಗ್ಯ ಇಲಾಖೆ ಮೂಲಕ ಸರ್ಕಾರ ಹಲವಾರು ಕಾರ್ಯಕ್ರಮ ಜಾರಿಗೊಳಿಸಿದೆ. ಅವುಗಳ ಸದುಪಯೋಗ ಪಡಿಸಿಕೊಂಡು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದರು.
ಸಿಎಚ್‌ಒ ವರ್ತ್ಯಾ ರಡ್ಡಿ ಮಾತನಾಡಿ, ಜೀವನಶೈಲಿ ಬದಲಾವಣೆಯಿಂದ ಸಾರ್ವಜನಿಕರಲ್ಲಿ ಅನೇಕ ರೋಗರುಜಿನಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬರೂ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ನೀರು, ಆಹಾರ ಸೇವಿಸಬೇಕು ಎಂದರು.
ಆರೋಗ್ಯ ಸಿಬ್ಬಂದಿ ಗಂಗಮ್ಮ ವಾಲಿಕಾರ, ಆಶಾ ಕಾರ್ಯಕರ್ತೆರಾದ ತಾಯಮ್ಮ ಸುಬೇದಾರ, ಗಾಯತ್ರಿ ಹರಿಜನ್, ಪ್ರಮುಖರಾದ ನಿಂಗಪ್ಪ ಸೂಳಿಕೇರಿ, ಬಸಮ್ಮ ತಿಪ್ಪಳ್ಳಿ ಇತರರು ಇದ್ದರು.