ಸಿಡಿಲಾರ್ಭಟಕ್ಕೆ ರಕ್ತ ತಪಾಸಣೆ ಕೇಂದ್ರದ ಲ್ಯಾಬೋರೇಟರಿ ಭಸ್ಮ

RTL LABORATARY FIRE
Published on

ರಟ್ಟಿಹಳ್ಳಿ: ತಾಲೂಕಿನ ಹಳ್ಳೂರು ಗ್ರಾಮದ ಲಕ್ಷ್ಮೀ ಕತ್ತಗಿ ಎಂಬುವವರು ಏಳೆಂಟು ಲಕ್ಷ ರೂ. ಸಾಲ ಮಾಡಿ ಪ್ರಾರಂಭಿಸಿದ್ದ ರಕ್ತ ತಪಾಸಣೆ ಕೇಂದ್ರದ ಲ್ಯಾಬೋರೇಟರಿಗೆ ಗುರುವಾರ ರಾತ್ರಿ ಸಿಡಿಲು ಬಡಿದಿದ್ದರಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.

ಹಳ್ಳೂರು ಗ್ರಾಮದಲ್ಲಿ ಸಿಡಿಲು ಬಡಿದು ರಕ್ತ ತಪಾಸಣೆ ಕೇಂದ್ರದ ಲ್ಯಾಬೋರೇಟರಿಯಲ್ಲಿನ ಎಲ್ಲ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ವಿಷಯ ತಿಳಿದು ಶುಕ್ರವಾರ ಬೆಳಗ್ಗೆ ಶಾಸಕ ಯು.ಬಿ. ಬಣಕಾರ, ತಹಸೀಲ್ದಾರರು ಶ್ವೇತಾ ಅಮರಾವತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂದಾಯ ನಿರೀಕ್ಷಕ ಶಂಕರ ಎಂ.ಎ., ಗ್ರಾಮ ಲೆಕ್ಕಾಧಿಕಾರಿ ಕುಮಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net