ಲ್ಯುಕೇಮಿಯಾ ರೋಗಕ್ಕೆ ರಕ್ತ ಕಾಂಡಕೋಶ ದಾನ: ಕ್ಯಾನ್ಸರ್​ನಿಂದ ಬಳಲುತ್ತಿರುವ ವೈದ್ಯೆ ಮನವಿ

Dr Shobha
Published on

ಬೆಂಗಳೂರು: ಪ್ರತಿವರ್ಷ ಕ್ಯಾನ್ಸರ್​ನಿಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಲ್ಯುಕೇಮಿಯಾ ಕೂಡ ಒಂದು. ಲ್ಯುಕೇಮಿಯಾ ಎಂದರೆ ನಿಮಗೆ ಥಟ್ಟನೆ ಅರ್ಥವಾಗುವುದಿಲ್ಲ. ಆದರೆ, ಕನ್ನಡದಲ್ಲಿ ರಕ್ತದ ಕ್ಯಾನ್ಸರ್ ಎಂದು ಹೇಳಿದರೆ ಬಹುಬೇಗನೆ ತಿಳಿಯುತ್ತದೆ.

ಲ್ಯುಕೇಮಿಯಾ ರೋಗ ಗುಣ ಪಡಿಸಲಿರುವ ಪರಿಣಾಮ ಕಾರಿ ಮಾರ್ಗವೆಂದರೆ ಕಾಂಡಕೋಶ ವರ್ಗಾವಣೆ (ಸ್ಟೆಮ್ ಸೆಲ್ ಟ್ರಾನ್ಸ್​ಫ್ಯೂಷನ್). ಇದರಿಂದ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಯುಎಸ್​ನಲ್ಲಿ ಇರುವ ಕರ್ನಾಟಕ ಮೂಲದ ವೈದ್ಯೆ ಯೊಬ್ಬರೀಗ ಲ್ಯುಕೇಮಿಯಾ ದಿಂದ ಬಳಲುತ್ತಿದ್ದು, ರಕ್ತ ಕಾಂಡಕೋಶ (ಬ್ಲಡ್ ಸ್ಟೆಮ್​ ಸೆಲ್​) ದಾನದ ಅಗತ್ಯವಿದೆ.

ಮಂಡ್ಯ ಮೂಲದ 45 ವರ್ಷದ ಡಾ. ಶೋಭಾ ಲ್ಯುಕೇಮಿಯಾದಿಂದ ಬಳಲುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು, ಲ್ಯುಕೇಮಿಯಾ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಜೀವ ಉಳಿಯಲು ತಕ್ಷಣವೇ ರಕ್ತದ ಕಾಂಡಕೋಶ ಕಸಿಯ ಅಗತ್ಯವಿದೆ. ಹೀಗಾಗಿ ಕಾಂಡಕೋಶ ದಾನ ಮಾಡಲು ಅವರು ಮನವಿ ಮಾಡಿದ್ದಾರೆ.

ಜನಸಂಖ್ಯಾಶಾಸ್ತ್ರೀಯವಾಗಿ ಹಾಗೂ ಜನಾಂಗೀಯವಾಗಿ ಒಂದೇ ರೀತಿಯ ದಾನಿಗಳ ಕಾಂಡಕೋಶ ವರ್ಗಾವಣೆಯಿಂದ ಲ್ಯುಕೇ ಮಿಯಾ ರೋಗ ಗುಣಪಡಿಸಲು ಪರಿಣಾಮಕಾರಿ. ಹೀಗಾಗಿಯೇ ಭಾರತೀಯ ಸಮುದಾಯ, ಅದರಲ್ಲೂ ಕರ್ನಾಟಕದಿಂದ ಕಾಂಡಕೋಶ ದಾನ ಮಾಡಲು ನೋಂದಣಿ ಮಾಡಿಕೊಳ್ಳುವಂತೆ ಶೋಭ ವಿನಂತಿಸಿದ್ದಾರೆ.

18ರಿಂದ 55 ವರ್ಷದೊಳಗಿ ನವರು ಕಾಂಡಕೋಶಗಳನ್ನು ದಾನ ಮಾಡಬಹುದಾಗಿದ್ದು, ಹೊಂದಾಣಿಕೆ ಕಂಡುಬಂದರೆ ದಾನ ಪ್ರಕ್ರಿಯೆಯಲ್ಲಿ ಪ್ಲಾಸ್ಮಾ ಅಥವಾ ಪ್ಲೇಟ್​ಲೆಟ್​ಗಳನ್ನು ದಾನಿಗಳಿಂದ ಪಡೆಯಲಾಗುವುದು. ಇವರು ದಾನ ಮಾಡಿದ 1-2 ದಿನಗಳಲ್ಲಿ ಸಾಮಾನ್ಯ ದಿನಚರಿಗೆ ಮರಳಬಹುದಾಗಿದೆ. ನೋಂದಣಿಗೆ ಕ್ಯೂಆರ್ ಕೋಡ್ ಬಳಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net