ರಕ್ತದೊತ್ತಡ ಕಡಿಮೆಯಾಗಿ ವ್ಯಕ್ತಿ ಸಾವು

Crime Logo
Published on

ಹಾವೇರಿ: ರಕ್ತದೊತ್ತಡ ಕಡಿಮೆಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಬುಲ್ಡಾನ್​ ಜಿಲ್ಲೆಯ ಮೋಟಾಮೇರಾ ಗ್ರಾಮದ ಮನೋಹರ ಹರಿಬಾಹೊ ಸೊಳಂಕಿ (44) ಮೃತ ವ್ಯಕ್ತಿ.

ಈತ ಕೃಷಿ ಕೆಲಸಕ್ಕಾಗಿ ಹೊಂಬರಡಿ ಗ್ರಾಮಕ್ಕೆ ಬಂದಿದ್ದ. ರಾತ್ರಿ ಜಮೀನಿನಲ್ಲಿ ಹಾಕಿದ್ದ ಟೆಂಟ್​ನಲ್ಲಿ ಮಲಗಿದ್ದ ಸಮಯದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net