

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಎದುರು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪಂಗಡಗಳ ಪೌರಕಾಮಿರ್ಕರ ಮತ್ತು ನೌಕರರ ಸಂಘವು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.
ನೂರಾರು ಪೌರಕಾಮಿರ್ಕರು ಸೋಮವಾರ ತಮ್ಮ ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿಗೆ ರವಾನಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪಾ ದ್ವಾಸಲಕೇರಿ, ಯಲವ್ವ ದೇವರಗುಡಿಹಾಳ, ಲಕ್ಷ್ಮೀ ಗುರನ್ನವರ, ನಿಂಗಪ್ಪ ರಾಮಯ್ಯನವರ, ಕನಕಪ್ಪ ಕೋಟಬಾಗಿ, ಸುಮಿತ್ರಾ ಹೊಸಳ್ಳಿ, ಮಹಾದೇವ ಮೊರಬದ, ಇತರರು ಇದ್ದರು.