

ಚಿತ್ರದುರ್ಗ: ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅಖಿಲ ಭಾರತೀಯ ಥೇರಾಪಂಥ್ ಯುವಕ್ ಪರಿಷತ್,ರೋಟರಿ ಕ್ಲಬ್, ವಾಸವಿ ಯುವಜನ ಸಂಘ, ಆರ್ಯವೈಶ್ಯ ಮಹಾಸಭಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶನಿವಾರ ನಗರದ ರೋಟರಿ ಬಾಲಭವನ,ಥೇರಾಪಂಥ್ ಭವನ ಹಾಗೂ ವಾಸವಿ ಮಹಲ್‌ನಲ್ಲಿ ಮೆಘಾ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಥೇರಾಪಂಥ್ ಭವನದಲ್ಲಿ 54,ರೋಟರಿ ಬಾಲಭವನದಲ್ಲಿ 25 ಹಾಗೂ ವಾಸವಿಮಹಲ್‌ನಲ್ಲಿ 21 ಮಂದಿ ರಕ್ತದಾನ ಮಾಡಿದರು. ರೆಡ್‌ಕ್ರಾಸ್ ಸಂಸ್ಥೆ ರಾಜ್ಯಸಮಿತಿ ಸದಸ್ಯ ಕೆ.ಮಧುಪ್ರಸಾದ್ ಮಾತನಾಡಿ,ಭಾರತದಲ್ಲಿ ಪ್ರತಿವರ್ಷವೂ 13.50 ಲಕ್ಷ ಯೂನಿಟ್ ರಕ್ತದ ಅವಶ್ಯವಿದ್ದು,ಪ್ರತಿ ವರ್ಷ ಎರಡೂವರೆ ಲಕ್ಷ ಯೂನಿಟ್ ರಕ್ತದ ಕೊರತೆಯಾಗುತ್ತದೆ.
ಅಪಘಾತ,ಆಪರೇಷನ್,ಹೆರಿಗೆ ಸಂದರ್ಭದಲ್ಲಿ ತುರ್ತಾಗಿ ರಕ್ತದ ಅಗತ್ಯವುಂಟಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತೀಯ ಥೇರಾಪಂಥ್ ಯುವಕ ಪರಿಷತ್‌ನ ವಿಕ್ರಾಂತ್‌ಜೈನ್,ವಿನೋದ್‌ಭಾಪ್ನ,ರೋಟರಿ ಕ್ಲಬ್ ಅಧ್ಯಕ್ಷೆ ಮಾಧುರಿ ಮಧು ಪ್ರ ಸಾದ್,ಕಾರ್ಯದರ್ಶಿ ಜಯಶ್ರೀಷಾ,ಗಾಯತ್ರಿಶಿವರಾಂ,ವಿನಯ್‌ಪ್ರಸಾದ್,ಅವಿನಾಶ್,ವೆಂಕಟೇಶ್‌ಕುಮಾರ್,ಮಜಹರ್‌ವುಲ್ಲಾ,ಎಸ್. ವೀರೇಶ್ ಮತ್ತಿತರರು ಇದ್ದರು.