31 ವರ್ಷದಲ್ಲಿ 31 ಬಾರಿ ರಕ್ತದಾನ ಮಾಡಿದ ನೂತನ ಜೈನ್‌

Nutan Jain
Published on

ಕಾರವಾರ: ಪತ್ರಿಕೆ ವಿತರಕ ನೂತನ ಜೈನ್ 31 ರ‍್ಷಗಳಲ್ಲಿ 31 ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ನೂತನ್ ಶುಕ್ರವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 31 ನೆ ಬಾರಿ ರಕ್ತದಾನ ಮಾಡಿದರು.

ಚಿಕ್ಕಂದಿನಿಂದಲೂ ಪತ್ರಿಕೆ ವಿತರಣೆ ಮಾಡುತ್ತಿದ್ದ ಅವರು 17 ನೇ ವಯಸ್ಸಿಗೆ ಕುಟುಂಬದ ಜವಾಬ್ದಾರಿ ಹೊತ್ತು. ಪೂರ್ಣಾವಽಯ ವೃತ್ತಿಗಿಳಿದರು. 18 ನೆ ವಯಸ್ಸಿನಲ್ಲಿ ಮೊದಲ ಬಾರಿ ರಕ್ತದಾನ ಮಾಡಿದ್ದರು. ನಂತರ ವರ್ಷದಲ್ಲಿ ಕನಿಷ್ಠ 2 ರಿಂದ 3 ಬಾರಿ ರಕ್ತದಾನ ಮಾಡುತ್ತ ಬಂದಿದ್ದಾರೆ. 2019 ರಲ್ಲಿ ಅಗಲಿದ ಗೆಳೆಯ ಪ್ರದೀಪ್ ಹೆಸರಿನಲ್ಲಿ ಯೂತ್ ಬ್ಲಡ್ ಗ್ರೂಪ್ ಎಂಬ ವ್ಯಾಟ್ಸ್ ಆ್ಯಪ್ ಗುಂಪು ರಚಿಸಿಕೊಂಡು ಅಗತ್ಯವಿದ್ದವರಿಗೆ ರಕ್ತ ಕೊಡುವ ಕಾರ್ಯ ಮಾಡುತ್ತಿದ್ದಾರೆ. ಗ್ರೂಪ್ ಮೂಲಕ 500 ಕ್ಕೂ ಹೆಚ್ಚು ಮಂದಿಗೆ ತಮ್ಮ ತಂಡದ ಮೂಲಕ ರಕ್ತದ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. 10 ಕ್ಕಿಂತ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಹಲವರಿಗೆ ನೆರವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net