ರಕ್ತದಾನದಿಂದ ಉಳಿಯಲಿದೆ ಮೂರು ಜೀವ

h9-blood donate
Published on

ಹುಬ್ಬಳ್ಳಿ: ದಿ. ಮೂರುಸಾವಿರಪ್ಪಣ್ಣ ಕೊರವಿ ಅವರ 85ನೇ ಜನ್ಮ ದಿನ ನಿಮಿತ್ತ ನಿರ್ಮಲಾ ಫೌಂಡೇಷನ್, ಎನ್‌ಎಸ್‌ಎಸ್, ರಾಷ್ಟ್ರೋತ್ಥಾನ ರಕ್ತ ಭಂಡಾರ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಇಲ್ಲಿಯ ಉಣಕಲ್‌ನ ಶ್ರೀನಗರದ ಚೇತನ ಸಮೂಹಸಂಸ್ಥೆಗಳ ಅವರಣದಲ್ಲಿ ಸೋಮವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತ ದಾನ. ರಕ್ತ ದಾನ ಮಾಡುವುದರಿಂದ ಮೂರು ಜೀವ ಉಳಿಸಬಹುದು. ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಸಾಮಾಜಿಕ ಕಳಕಳಿ ಬೆಳಿಸಿಕೊಳ್ಳಬೇಕು. ಮನೋದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಮಾತನಾಡಿ, ರಕ್ತ ದಾನದ ಮಹತ್ವವನ್ನು ವಿದ್ಯಾರ್ಥಿಗಳು ಜಗತ್ತಿಗೆ ಸಾರಬೇಕು. ಶಿಕ್ಷಣದ ಮೂಲಕ ಸಾಮಾಜಿಕ ಮೌಲ್ಯ ಎತ್ತಿ ಹಿಡಿಯಬೇಕು ಎಂದರು.

ಎಚ್‌ಡಿಎಫ್‌ಸಿ ಬ್ಯಾಂಕ್ ಹುಬ್ಬಳ್ಳಿ ಶಾಖೆಯ ರಾಘವೇಂದ್ರ ರಾವ್, ರಾಷ್ಟ್ರೋತ್ಥಾನ ರಕ್ತ ನಿಧಿಯ ದತ್ತಮೂರ್ತಿ ಕುಲಕರ್ಣಿ, ಕೊರವಿ ಡೆವಲಪರ್ಸ್‌ನ ಶಶಿಧರ ಕೊರವಿ, ಸುನಿತಾ ಕೊರವಿ, ಸುಮತಿ ದೀಕ್ಷಿತ, ಪ್ರಾಚಾರ್ಯರಾದ ಡಾ. ಅಶೋಕ ವಡಕಣ್ಣವರ, ಡಾ.ಕೆ.ಸಿ. ಪಾಂಗಿ, ಎನ್‌ಎಸ್‌ಎಸ್ ಘಟಕದ ಸಂಯೋಜಕ ಡಾ. ಪ್ರಶಾಂತ ಗಾಮನಗಟ್ಟಿ, ಡಾ. ಶಿಲ್ಪಾ ಕುಲಕರ್ಣಿ, ಪ್ರೊ. ನಿಧಿ ದೇಶಪಾಂಡೆ, ಪ್ರೊ. ಎಂ.ಬಿ. ಹೂಲಿ, ಪ್ರೊ. ಭಾಗ್ಯಶ್ರೀ ಬಳಿಗಾರ, ಪ್ರೊ. ಯಶೋಧ ನಾಯಕ, ಮಹೇಶ ಸಂಗಮ್, ಸುನೀಲ್ ಕಲಬುರಗಿ, ಶೀಲಾ ಕಂಬಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net