ಕರ್ತವ್ಯವಾಗಬೇಕು ರಕ್ತದಾನ

KDR blood
ಕಡೂರಿನಲ್ಲಿ ರಕ್ತದಾನಿಯನ್ನು ರೋಟರಿಯಿಂದ ಸನ್ಮಾನಿಸಲಾಯಿತು. ಕೆ.ಪಿ.ರಾಘವೇಂದ್ರ, ಸಿ.ಆರ್. ಪ್ರೇಮ್‌ಕುಮಾರ್, ಸವಿತಾ, ನಾಗೇಂದ್ರ ಗುಪ್ತ ಇತರರಿದ್ದರು.
Published on

ಡೂರು: ರಕ್ತದಾನ ಎಲ್ಲರ ಕರ್ತವ್ಯವಾಗಬೇಕಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಹೇಳಿದರು.

ವಿಶ್ವ ರಕ್ತದಾನ ದಿನದ ಪ್ರಯುಕ್ತ ಮಂಗಳವಾರ ರೋಟರಿ ಸಂಸ್ಥೆ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಅಗತ್ಯವಿದ್ದವರಿಗೆ ಸೂಕ್ತ ಸಮಯದಲ್ಲಿ ರಕ್ತ ದೊರಕಿಸುವ ಕಾರ್ಯವನ್ನು ರೋಟರಿ ಕ್ಲಬ್ ಮಾಡುತ್ತ ಬಂದಿದೆ. ಕಡೂರು ಘಟಕ ಸಹ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರಿಸುತ್ತಿದೆ ಎಂದರು.
ರೋಟರಿ ಸಮುದಾಯ ಸೇವೆ ನಿರ್ದೇಶಕ ಸಿ.ಆರ್.ಪ್ರೇಮ್‌ಕುಮಾರ್ ಸೇರಿದಂತೆ ಹಲವಾರು ಜನರು ರಕ್ತದಾನ ಮಾಡಿದರು. ಸುಮಾರು 30 ಯೂನಿಟ್ ರಕ್ತ ಸಂಗ್ರಹಿಸಿ ಶಿವಮೊಗ್ಗ ರೋಟರಿ ರಕ್ತನಿಧಿಗೆ ನೀಡಲಾಯಿತು. ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ನಾಗೇಂದ್ರ ಗುಪ್ತ, ರೋಟರಿ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ದ್ವಾರಕಾನಾಥ ಬಾಬು, ಗೋಪಾಲಕೃಷ್ಣ, ಭಂಡಿ ರಂಗನಾಥ್, ಕೃಷ್ಣಸ್ವಾಮಿ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net