

ಯಲಬುರ್ಗಾ: ಆರೋಗ್ಯವಂತರಾದ ಪ್ರತಿಯೊಬ್ಬರೂ ರಕ್ತದಾನ ಮೂಲಕ ಮಾನವೀಯತೆ ಮೆರೆಯಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆಯ ಜನಸಂಪರ್ಕ ಅಧಿಕಾರಿ ದೇವೆಂದ್ರಪ್ಪ ಹಿಟ್ನಾಳ ಹೇಳಿದರು.
ಪಟ್ಟಣದ ಶ್ರೀಧರಮುರಡಿ ಹಿರೇಮಠದ ಸಮುದಾಯ ಭವನದಲ್ಲಿ ಸ್ನೇಹಜೀವಿ ಗೆಳೆಯರ ಬಳಗ, ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ರಕ್ತದ ಮಾದರಿ ಸಂಗ್ರಹಿಸಿ ಅಪಘಾತ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲಾಗುತ್ತದೆ. ಪಟ್ಟಣದ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ರ್ಏಡಿಸಿರುವುದು ಶ್ಲಾಘನೀಯ ಎಂದರು. ಟಿಎಚ್‌ಒ ಮಂಜುನಾಥ ಬ್ಯಾಲಹುಣಸಿ ಸೇರಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಆಯೋಜಕರಾದ ಬಾಬಾ ಕಲಂದರ್, ಹನುಮೇಶ ವಂದಾಲಿ, ಪ್ರಮುಖರಾದ ಕಲ್ಲಪ್ಪ ಕರಮುಡಿ, ಅಮರೇಶ ಹುಬ್ಬಳ್ಳಿ, ಮಹಮ್ಮದ್ ಖಾಜಿ, ಮೇಘರಾಜ ಹುಬ್ಬಳ್ಳಿ, ಅಬ್ದುಲ್ ಖಾಜಿ, ಶಾಹಿದ್, ಕುರ್ಷಿದ್ ಅಲಿ ನೀಲಗಾರ್, ಸಂಗಮೇಶ ಬಿದರಿ, ಮಲ್ಲಿಕಾರ್ಜುನ ನಿಡಗುಂದಿ ಇತರರಿದ್ದರು.