

ಬೈಲಹೊಂಗಲ: ಪಟ್ಟಣದ ಎ.ವಿ.ಢಮ್ಮಣಗಿ ವಿಜನ್ ೌಂಡೇಷನ್ದ ಕಲ್ಪವ ಮಾದರಿ ಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಜಿ.ವಿ.ಆಯುರ್ವೇದಿಕ್ ವೈದ್ಯಕಿಯ ಕಾಲೇಜ್, ಈಶಾ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪಾಲಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ಪ್ರಾಚಾರ್ಯ ಡಾ.ಸುಭಾಸ ಬಗಾಡೆ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ರಕ್ತದ ಅವಶ್ಯವಿರುವ ವ್ಯಕ್ತಿಗಳ ರಣೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ಶಿಕರು, ಪಾಲಕರು ಸೇರಿ 85 ಜನರು ರಕ್ತದಾನ ಮಾಡಿದರು.
ಡಾ.ಪುನೀತ ಡಿ., ಡಾ.ಭಾರತಿ ಡಿ.ಕೆ., ಡಾ.ಪ್ರಭುದೇವ ಸಂಗೊಳ್ಳಿ, ಡಾ.ಜಗದೀಶ ಅರಳಿಕಟ್ಟಿ, ಡಾ.ಬಸನಾಯ್ಕ ರುದ್ರನಾಯ್ಕರ, ಡಾ.ಶ್ರೀನಿವಾಸ ಕಾಂಬಳೆ, ಡಾ.ನಾಗರಾಜ ಕಂಬಾರ, ಡಾ.ಸಂತೋಷ ಕಂಚಯನಿ ಅವರು ತಪಾಸಣೆ ನಡೆಸಿದರು. ಶಿಬಿರದಲ್ಲಿ 75 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಸ್ವಾಗತ ಸಮಾರಂಭ: ಶ್ರೀ ಎ.ವಿ.ಢಮ್ಮಣಗಿ ವಿಜನ್ ೌಂಡೇಷನ್ ವತಿಯಿಂದ ನೂತನ ನೂತನ ಕಲ್ಪವೃಕ್ಷ ಪಿಯು ಕಾಲೇಜ್ ಪ್ರಾರಂಭೋತ್ಸವ ಹಾಗೂ ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಪೂಜ್ಯಶ್ರೀ ಬಳ್ಳಾರಿ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯೆ ಮಂಗಳಾ ಢಮ್ಮಣಗಿ, ಹರ್ಷ ಢಮ್ಮಣಗಿ, ಆಡಳಿತ ಮಂಡಳಿ ಸದಸ್ಯ ದಿನಕರ ಜೋಷಿ, ಬೆಂಗಳೂರಿನ ಕ್ರಿಯೇಟಿವ್ ಟೀಚಿಂಗ್ ಅಕಾಡೆಮಿಯ ಎಸ್.ಎಸ್.ಎ್. ರೇವತಿ ಐಯ್ಯರ್, ಪ್ರಾಚಾರ್ಯ ಪುನೀತ ಎಂ. ಇತರರಿದ್ದರು.