ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ

h13-ima
Published on

ಹುಬ್ಬಳ್ಳಿ: ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ. ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಿಸುವುದಲ್ಲದೇ ಇನ್ನೊಬ್ಬರ ಜೀವವನ್ನೂ ಉಳಿಸಬಹುದು ಎಂದು ಐಎಂಎ ಧಾರವಾಡ ಮಹಿಳಾ ವೈದ್ಯರ ಶಾಖೆ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಹೇಳಿದರು.
ಧಾರವಾಡದ ಸಿಎಸ್‌ಐ ವಾಣಿಜ್ಯ ಕಾಲೇಜ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಕೆಲವರು ಕೆಲ ಕಾಯಿಲೆಗಳನ್ನು ಹೊಂದಿರುತ್ತಾರೆ. ಅಂಥವರು ರಕ್ತದಾನ ಮಾಡಬಾರದು. ಆರೋಗ್ಯವಂತರು ಯಾರಾದರೂ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎಂದರು.
ಇದೇ ವೇಳೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಶಾಖೆ ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ, ಪ್ರಾಚಾರ್ಯೆ ಡಾ. ಕಮಲಾ ಧವಳೆ, ಆಸೀಫ್ ತೋರಗಲ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net