ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು

23Muragod1
Published on

ಮುರಗೋಡ: ಆರೋಗ್ಯಕರವಾಗಿರಲು ರಕ್ತದಾನ ಮಾಡುವುದು ಒಳ್ಳೆಯದು ಎಂದು ಡಾ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಸ್ಮಾ ಸಂಗೊಳ್ಳಿ ಹೇಳಿದರು.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಪಂ ಮತ್ತು ತಾಲೂಕು ಆರೋಗ್ಯ ಕೇಂದ್ರ ಸವದತ್ತಿ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಯುಷ್ಯ ವೈದ್ಯ ಡಾ. ಆರ್.ಎಸ್. ಬಾಳಿಕಾಯಿ, ಪಿಡಿಒ ರಾಯಪ್ಪ ಬಾಗಿಲದ, ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೂಳಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದಾನವು ಜೀವ ಉಳಿಸುವಲ್ಲಿ ಉಪಯೋಗವಾಗಲಿದೆ ಎಂದು ತಿಳಿಸಿದರು. ಗ್ರಾಪಂ ಕಾರ್ಯದರ್ಶಿ ಯು.ಬಿ. ಅಣ್ಣಿಗೇರಿ, ಉಪಾಧ್ಯಕ್ಷೆ ಮಹಾದೇವಿ ಮಬನೂರ, ಸಂಗಪ್ಪ ಬೆಳಗಾವಿ, ಎಂ.ಬಿ. ರಾಯರ, ನೀಲಮ್ಮ ಪೊಜೇರಿ, ತಸ್ಲೀಮಾ ಅರಭಾವಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net