ರಕ್ತದಾನ ಮಾಡುವುದು ಎಲ್ಲರ ಕರ್ತವ್ಯ

3
ಕಬ್ಬೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗೆ ಪ್ರಮಾಣಪತ್ರ ವಿತರಿಸಲಾಯಿತು. ಡಾ.ಸುಕುಮಾರ ಬಾಗಾಯಿ, ರಾಜೇಂದ್ರ ಖನದಾಳೆ, ಡಾ.ಐ.ಆರ್.ಕಡಕೋಳ ಇತರರು ಇದ್ದರು.
Published on

ಕಬ್ಬೂರ: ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅದಕ್ಕಾಗಿ ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಚಿಕ್ಕೋಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಬಾಗಾಯಿ ಹೇಳಿದರು.

ಪಪಂ ಕಬ್ಬೂರ ಮತ್ತು ನಾಗರಮುನ್ನೊಳಿ ಮತ್ತು ಜಾಗನೂರ ಗ್ರಾಪಂ ಸಹಯೋಗದಲ್ಲಿ ಬುಧವಾರ ಕಬ್ಬೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಯುವಕರು ಮುಂದಾಗಬೇಕು. ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಂದ್ರ ಖನದಾಳೆ ಮಾತನಾಡಿ, ಈ ವರ್ಷ ಹೆಚ್ಚು ರಕ್ತದಾನ ಮಾಡಿ ಸುತ್ತಲಿನ ನಾಗರಿಕರು ಸಹಕಾರಿಯಾಗಿದ್ದಾರೆ. 118 ಪ್ಯಾಕೆಟ್ ರಕ್ತ ಸಂಗ್ರಹವಾಗಿದೆ ಎಂದರು. ಡಾ.ಐ.ಆರ್.ಕಡಕೋಳ, ಡಾ.ಎಸ್.ಎಂ.ಕರಗಾವ, ಡಾ.ಮಹಮ್ಮದ್ ಅರೀಫ್, ಡಾ.ರಾಘವೇಂದ್ರ ಪರೀಟ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net