

ವಿಜಯವಾಣಿ ಸುದ್ದಿಜಾಲ ಧಾರವಾಡ
ರಕ್ತದಾನ ಅನ್ನದಾನಕ್ಕಿಂತ ಶ್ರೇಷ್ಠ. ಅಪಘಾತ, ಅನಾರೋಗ್ಯ, ಹೆರಿಗೆಯಂತಹ ತುರ್ತು ಪರಿಸ್ಥಿತಿಗಳಲ್ಲಿ ಅಮೂಲ್ಯ ಜೀವ ಉಳಿಸುವ ಸಂಜೀವಿನಿ ರಕ್ತದಾನ ಎಂದು ಮನೋವೈದ್ಯ ಡಾ. ಆನಂದ ಪಾಂಡುರ0ಗಿ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ಮೆಡಿಕಲ್ ಕಾಲೇಜ್ ವತಿಯಿಂದ ರಾಷ್ಟೋçತ್ಥಾನ ರಕ್ತಭಂಡಾರ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ರಕ್ತದಾನ ಮನುಷ್ಯತ್ವದ ಶ್ರೇಷ್ಠತೆಯಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮಾನವನ ದೇಹಕ್ಕೆ ಅಗತ್ಯ ರಕ್ತವನ್ನು ಯಂತ್ರ ಅಥವಾ ಲ್ಯಾಬ್‌ನಲ್ಲಿ ತಯಾರಿಸುವುದು ಸಾಧ್ಯವಾಗಿಲ್ಲ. ನಾವು ಕೊಡುವ ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸಬಲ್ಲದು ಎಂದರು.
ಇದೇವೇಳೆ ಈರೇಶ ಅಂಚಟಗೇರಿ ಅವರು ರಕ್ತದಾನ ಮಾಡಿ ಮಾದರಿಯಾದರು.
ಎಸ್. ರಾಧಾಕೃಷ್ಣನ್, ಡಾ. ವೈಷ್ಣವಿ, ಬಸವರಾಜ ತಾಳಿಕೋಟಿ, ಡಾ. ವಿಜಯ ಕುಲಕರ್ಣಿ, ಡಾ. ವಿನಯ ಕುಲಕರ್ಣಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.