ರಕ್ತದಾನ ಮಾಡಿದರೆ ಆರೋಗ್ಯ ವೃದ್ಧಿ

10Anand2
ಬೆಳಗಾವಿ ಮಹಾಂತೇಶ ನಗರದ ಡಾ..ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಕಾರಂಜಿಮಠದ ಸ್ವಾಮೀಜಿ 75ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಜರುಗಿತು. ಶಂಕರ ಗುಡಸ, ಸಂಗಮೇಶ ಅರಳಿ, ಸುರೇಶ ನರಗುಂದ, ಸತೀಶ ಪಾಟೀಲ, ಎಸ್.ಎಸ್.ಪೂಜೇರಿ ಇತರರು ಇದ್ದರು.
Published on

ಬೆಳಗಾವಿ: ರಕ್ತದಾನದಿಂದ ಒಂದು ಜೀವ ಉಳಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಲಾಭವಿದೆ ಎಂದು ಕೆಎಲ್‌ಇ ಡಾ.ಎಸ್.ಪಿ ಆನಂದ ತಿಳಿಸಿದರು . ಇಲ್ಲಿನ ಮಹಾಂತೇಶ ನಗರದ ಡಾ..ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಭಾನುವಾರ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ತದಾನದಿಂದ ಮೂರು ಲಾಭಗಳಿವೆ. ಜೀವ ಉಳಿಯುತ್ತವೆ. ದಾನದಿಂದ ಕ್ಯಾನ್ಸರ್ ಬರುವುದಿಲ್ಲ. ಹದಯಾಘಾತವಾಗುವುದಿಲ್ಲ. ಬಿಪಿ, ಶುಗರ್ ಬರುವುದಿಲ್ಲ. 18 ರಿಂದ 60 ವರ್ಷ ಒಳಗಿನವರು ರಕ್ತದಾನ ಮಾಡಬಹುದು ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಶಿವಯೋಗಿ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಈರಣ್ಣಾ ದೇಯಣ್ಣವರ ಮಾತನಾಡಿ, ರಕ್ತದಾನದಿಂದ ಹತ್ತಾರು ಲಾಭಗಳಿವೆ. ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದರು. ಶಿಬಿರದಲ್ಲಿ 80 ದಾನಿಗಳು ರಕ್ತದಾನ ಮಾಡಿದರು.

ಶಂಕರ ಗುಡಸ, ಸಂಗಮೇಶ ಅರಳಿ, ಸುರೇಶ ನರಗುಂದ, ಸತೀಶ ಪಾಟೀಲ, ಎಸ್.ಎಸ್.ಪೂಜೇರಿ, ಆನಂದ ಕರ್ಕಿ, ವಿ.ಕೆ.ಪಾಟೀಲ, ಸುಜಾತಾ ಮತ್ತಿಕಟ್ಟಿ, ಸುವರ್ಣ ಗುಡಸ, ಜಯಶ್ರೀ ಚಾವಲಗಿ, ಶ್ವೇತಾ ಮುಂಗರವಾಡಿ, ಬಸವರಾಜ ಚಟ್ಟರ, ವಿರೂಪಾಕ್ಷಿ ದೊಡಮನಿ, ಶಿವಾನಂದ ಲಾಳಸಂಗಿ, ಜ್ಯೋತಿ ಬದಾಮಿ, ಕಮಲಾ ಗಣಾಚಾರಿ, ಅಕ್ಕಮಹಾದೇವಿ ತೆಗ್ಗಿ, ಪ್ರಸಾದ ಹಿರೇಮಠ ಡಾ.ಮಹೇಶ ಗುರಣಗೌಡ್ರ, ಬಸವರಾಜ ಕರಡಿಮಠ, ಆನಂದ ಶೆಟ್ಟಿ, ಅನಿಲ್ ರಗಶೆಟ್ಟಿ, ವೈ.ಎಸ್.ಪಾಟೀಲ, ಶ್ರೀದೇವಿ ನರಗುಂದ ಇತರರಿದ್ದರು. ಸದಾಶಿವ ದೇವರಮನಿ ನಿರೂಪಿಸಿದರು. ಸಂಗಮೇಶ ಅರಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net