

ಕುಲಗೋಡ: ರಕ್ತದಾನ ಮಾಡುವುದರಿಂದ ಹೃದಯಾಘಾತ ಸೇರಿದಂತೆ ಇತರ ಕಾಯಿಲೆಗಳಿಗೆ ತಡೆಯೊಡ್ಡ ಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಗೋಳ ಹೇಳಿದರು.
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜಾತಿ, ಮತ, ಧರ್ಮ ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಕಾರ್ಯ ಇದಾಗಿದೆ. ರಕ್ತ ಅಗತ್ಯವಿರುವ ಜನರಿಗೆ ಸಮಯಕ್ಕೆ ಸರಿಯಾಗಿ ಜೀವ ಉಳಿಸಲು ನೀವು ನೀಡಿದ ರಕ್ತ ಸಹಾಯವಾಗುತ್ತದೆ ಎಂದರು.
ಆರೋಗ್ಯಧಿಕಾರಿ ಮಲ್ಲವ್ವ ನಾಯಕ, ರುದ್ರಪ್ಪ ಬಸಾಪೂರ, ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಶರತ ಉಪರೆ, ಡಾ.ಮಹೇಶ ಕಂಕನವಾಡಿ, ಸುಭಾಸ ವಂಟಗೋಡಿ, ಗ್ರಾಪಂ ಉಪಾಧ್ಯೆ ಹೇಮಾ ಕುರಬೇಟ, ಎಚ್.ಬಿ.ರರೆ, ಸವಿತಾ ಗುರವ, ಶ್ರೀಪತಿ ಗಣಿ, ಸುರೇಶ ತಳವಾರ, ಶಾನೂರ್ ಮುಲ್ಲಾ ಇತರರಿದ್ದರು.