ಪರೋಪಕಾರಿಗಳು ಜನಮನದಲ್ಲಿ ಚಿರಾಯು : ನೌಫಲ್ ಹಾಶಿಮಿ ಕರಿಂಬಿಲ ಅಭಿಪ್ರಾಯ

New Project (11)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸಣ್ಣ ಪ್ರಾಯದಲ್ಲೇ ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದವರ ಪಾಲಿನ ಆಪತ್ಬಾಂಧವನಾಗಿ ರಕ್ತದಾನಿಯಾಗಿ ಗುರುತಿಸಿಕೊಂಡಿದ್ದ ನೌಫಲ್ ನೆನಪಿನಲ್ಲಿ ಶಿಬಿರ ಅಯೋಜಿಸುತ್ತಿರುವುದು ಉತ್ತಮ ಕಾರ್ಯ. ಇಂತಹ ಯುವಕರು ನಮ್ಮಿಂದ ಅಗಲಿದರೂ ಜನಮನದಲ್ಲಿ ಸದಾ ಇರುತ್ತಾರೆ ಎಂದು ಆಲಡ್ಕ ಬದ್ರಿಯಾ ಜುಮಾ ಮಸೀದಿ ಖತೀಬ್ ನೌಫಲ್ ಹಾಶಿಮಿ ಕರಿಂಬಿಲ ಅಭಿಪ್ರಾಯಪಟ್ಟರು.

ಹರೇಕಳ ಗ್ರಾಪಂ, ಎಸ್‌ಬಿಐ ಫೌಂಡೇಶನ್, ಗ್ರಾಮೀಣ ಆರೋಗ್ಯ ಮತ್ತು ತರಬೇತಿ ಕೇಂದ್ರ ಹರೇಕಳ, ಸಮುದಾಯ ಆರೋಗ್ಯ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು ದೇರಳಕಟ್ಟೆ, ಹಸಿರುದಳ, ಮಂಗಳೂರು ದೆಬ್ಬೇಲಿ ಫ್ರೆಂಡ್ಸ್ ಸರ್ಕಲ್ ಮತ್ತು ಕೋಜಪಾಡಿ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಹಾಭಾಗಿತ್ವದಲ್ಲಿ ದಿ.ನೌಫಲ್ ದೆಬ್ಬೇಲಿ ಸ್ಮರಣಾರ್ಥ ಹರೇಕಳ ಗ್ರಾಮೀಣ ಆರೋಗ್ಯ ಹಾಗೂ ತರಬೇತಿ ಕೇಂದ್ರದಲ್ಲಿ ಭಾನುವಾರ ಬೃಹತ್ ರಕ್ತದಾನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಬ್ಲಡ್ ಡೋನರ್ಸ್ ಅಧ್ಯಕ್ಷ ನವಾಝ್ ನರಿಂಗಾನ ಮಾತನಾಡಿದರು. ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಮಾಜಿ ಉಪಾಧ್ಯಕ್ಷೆ ಕಲ್ಯಾಣಿ, ದೆಬ್ಬೇಲಿ ಮಸ್ಜಿದುಲ್ ಅಕ್ಸಾ ಅಧ್ಯಕ್ಷ ಅಬ್ದುಲ್ ರಝಾಕ್, ಆಲಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ರಫೀಕ್ ಹರೇಕಳ, ಎನ್‌ಎಸ್ ಯುಐ ಅಧ್ಯಕ್ಷ ಸಾಹಿಲ್ ಮಂಚಿಲ, ಪ್ರ.ಕಾ. ಯು.ಟಿ.ಫರೀದ್ ಇಫ್ತಿಕಾರ್, ಹರೇಕಳ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಏಂಜನ್ ಜಾಯ್, ಯೆನೆಪೋಯ ಆಸ್ಪತ್ರೆ ಡಾ.ದೀಪ್ತಿ ಶಿಬೊ, ಡಾ.ಸುಪ್ರಿಯಾ, ಹಸಿರುದಳದ ಮುಖ್ಯಸ್ಥ ಗುರು ತಿಮ್ಮಯ್ಯ, ವ್ಯವಸ್ಥಾಪಕ ನಾಗರಾಜ್ ಬಜಾಲ್, ಮೇಲ್ವಿಚಾರಕಿ ರೇಖಾ, ಸಮಾಜ ಸೇವಕ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಮುತ್ತಪ್ಪ ಢವಳಗಿ ವಂದಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net