ಪಕ್ಷಿಕೆರೆಯಲ್ಲಿ ರಕ್ತದಾನ, ಕೇಶದಾನ ಶಿಬಿರ

blood (1)
Published on

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆ, ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಹಾಗೂ ಮುರ್ಸಿ ಬ್ಯೂಟಿ ಆಕಾಡೆಮಿ, ಲೇಡಿಸ್ ಸೆಲೂನ್ ಆಶ್ರಯದಲ್ಲಿ ರಕ್ತದಾನ, ವೈದ್ಯಕೀಯ ತಪಾಸಣೆ, ಕೇಶದಾನ ಶಿಬಿರ ಭಾನುವಾರ ಪಕ್ಷಿಕೆರ ಸಂತ ಜೂದರ ಸಭಾಭವನದಲ್ಲಿ ನಡೆಯಿತು.

ಚರ್ಚ್‌ನ ರೋನಾಲ್ಡ್ ಸೆರಾವೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜೇಶ ರೋಸಾರಿಯೋ, ಅನಿಲ್ ಆಲ್ಡೆಡ್ ಪಿಂಟೋ, ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ಮಯ್ಯದ್ದಿ ಪಕ್ಷಿಕೆರೆ, ಮಂಗಳೂರು ಸೆಂಟ್ರಲ್ ರೋಟರಿಯ ಬ್ರಾಹೆಯ್ನಾ ಪಿಂಟೋ, ಕಿನ್ನಿಗೋಳಿ ರೋಟರಿಯ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸುದೀಪ್ ಡಿಸೋಜ, ಎ.ಜೆ. ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಡಾ.ಸುಶಾಂತ್, ಮರ್ಸಿ ಬ್ಯೂಟಿ ಅಕಾಡೆಮಿಯ ಮರ್ಸಿ ವೀಣಾ ಡಿಸೋಜ, ಪಕ್ಷಿಕೆರೆ ಚರ್ಚ್ ಸಮಿತಿಯ ಜಾಕ್ಸನ್ ಸಲ್ದಾನ್, ಆರೋಗ್ಯ ಆಯೋಗದ ಶಾಂತಿ ಫರ್ನಾಂಡಿಸ್, ಯುವಜನ ಆಯೋಗ ಸಂಸ್ಥೆಯ ರಿಯಾ ಡಿಸೋಜ ಮತ್ತಿತರರಿದ್ದರು. ರಾಬರ್ಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net