

ಹಾಸನ: ನಗರದ ಎನ್‌ಡಿಆರ್‌ಕೆ ನರ್ಸಿಂಗ್ ಕಾಲೇಜಿನಲ್ಲಿ ಹಾಸನ ಲಯನ್ಸ್ ಕ್ಲಬ್ ಹಾಗೂ ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್‌ನ ಸಹಯೋಗದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 80ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ರಮೇಶ್ ಮಾತನಾಡಿ, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ಯುವ ಜನತೆ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸಬೇಕು ಎಂದು ಸಲಹೆ ನೀಡಿದರು. ರೋಟರಿ ಸಂಸ್ಥೆಯ ಖಜಾಂಚಿ ಎಚ್.ಪಿ.ಅಶೋಕ್ ಕುಮಾರ್, ಕೆ.ಆರ್.ಮಲ್ಲೇಶ್ ಗೌಡ, ಜರ್ಸಿ ಎಚ್.ಕೆ. ನಾಗೇಶ್, ನಾಗರಾಜು, ಬಲ್ಲೇನಹಳ್ಳಿ ರವಿಕುಮಾರ್, ಕಾಲೇಜಿನ ಉಪನ್ಯಾಸಕರು, ಲಯನ್ಸ್ ಕ್ಲಬ್ ಸದಸ್ಯರು ಇದ್ದರು.