

ಹೆಬ್ರಿ: ತನಿಯಜ್ಜ ಮತ್ತು ಮಂತ್ರದೇವತೆ ಟ್ರಸ್ಟ್ ಮುಳ್ಳುಗುಡ್ಡೆ ಶಿವಪುರ, ಅಭಯಹಸ್ತ ಚಾರಿಟೆಬಲ್ ಟ್ರಸ್ಟ್, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಸಹಕಾರದಲ್ಲಿ ಭಾನುವಾರ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ, ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು.
ಉಡುಪಿ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಎಚ್.ಅಶೋಕ್ ಉದ್ಘಾಟಿಸಿದರು. ಶ್ರೀ ಕೊರಗಜ್ಜ ಕ್ಷೇತ್ರ ಆಡಳಿತ ಮೊಕ್ತೇಸರ ಪುನೀತ್ ಶೆಟ್ಟಿ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ವೈದ್ಯೆ ಡಾ.ಮಂಜುಶ್ರೀ, ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ರೋಶನ್ ಶೆಟ್ಟಿ ಕುಚ್ಚೂರು, ಸಂತೋಷ್ ಆಚಾರ್ಯ ಕಡ್ತಲ, ಶೇಖರ್ ಶೆಟ್ಟಿ, ದೇವಳಬೈಲ್ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.