

ಮಂಡ್ಯ: ವಿವಿಧ ಸಂಸ್ಥೆ ಸಹಯೋಗದಲ್ಲಿ ದೇಶದಲ್ಲಿ ಈ ವರ್ಷ ಒಂದೂವರೆ ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಸಂಕಲ್ಪವಿದೆ ಎಂದು ಶ್ರೀ ಸಾಯಿ ಎಲೆಕ್ಟ್ರಾನಿಕ್ಸ್ ಮತ್ತು ರ್ನಿಚರ್ಸ್ ಮಾಲೀಕ ಸ್ವಾಮಿ ಹೇಳಿದರು.
ನಗರದಲ್ಲಿ ಶ್ರೀ ಸಾಯಿ ಎಲೆಕ್ಟ್ರಾನಿಕ್ಸ್ ಮತ್ತು ರ್ನಿಚರ್ಸ್ ಶೋರೂಂನಲ್ಲಿ ಸ್ವಾತಂತ್ರ್ಯ ಸೇನಾನಿಗಳಾದ ಭಗತ್‌ಸಿಂಗ್, ರಾಜ್‌ಗುರು, ಸುಖದೇವ್ ಅವರ ಹುತಾತ್ಮದಿನ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕಂಡ ಮಹಾನ್ ಹೋರಾಟಗಾರರು ಹುತ್ಮಾತರಾದ ದಿನ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಕ್ತದಾನ ಶಿಬಿರ ನಡೆಯುತ್ತಿದೆ. ಒಟ್ಟಾರೆ ಈ ವಾರ ಕರ್ನಾಟಕದಲ್ಲಿ 182 ರಕ್ತದಾನ ಶಿಬಿರ ಹಾಗೂ ದೇಶಾದ್ಯಂತ 2000ಕ್ಕೂ ಹೆಚ್ಚು ಶಿಬಿರ ಆಯೋಜನೆಗೊಂಡಿದೆ. ಎನ್‌ಐಎಸ್‌ಕೆಎಎಸ್ ಸಂಸ್ಥೆ ನಡೆಸುತ್ತಿರುವ ಶಿಬಿರಕ್ಕೆ ನಮ್ಮ ಸಂಸ್ಥೆಯೂ ಸಹಕಾರ ನೀಡುತ್ತಿದೆ. ರಕ್ತದಾನ ಸಂಗ್ರಹದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಗುರಿ ಹೊಂದಿದ್ದೇವೆ. 2023ರಲ್ಲಿ ರಾಜ್ಯದಲ್ಲಿ 1700 ಯೂನಿಟ್ ಹಾಗೂ ದೇಶದಲ್ಲಿ 1,17 ಲಕ್ಷ ಯೂನಿಟ್ ರಕ್ತ ಸಂಗ್ರಹವಾಗಿತ್ತು ಎಂದು ತಿಳಿಸಿದರು.
ಮಿಮ್ಸ್ ರಕ್ತನಿಧಿ ಕೇಂದ್ರದ ವೈದ್ಯೆ ಡಾ.ಆದ್ರಾ, ಮಹಮದ್ ರಫಿ ಇತರರಿದ್ದರು. ಇದೇ ಸಂದರ್ಭದಲ್ಲಿ 45 ಯೂನಿಟ್ ರಕ್ತಸಂಗ್ರಹವಾಯಿತು.