ಯಶಸ್ವಿಯಾಗಿ ಜರುಗುತ್ತಿರುವ ರಕ್ತದಾನ ಶಿಬಿರ

Blood donation camp underway successfully
ಜಮಖಂಡಿ ನಗರದ ಓಲೇಮಠದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಹಿಳೆಯೊಬ್ಬರು ರಕ್ತದಾನ ಮಾಡಿದರು.
Published on

ಜಮಖಂಡಿ: ಬಸವ ಜಯಂತಿ ನಿಮಿತ್ತ ನಗರದ ಓಲೇಮಠದ ಆಶ್ರಯದಲ್ಲಿ ಏ.15 ರಿಂದ 29ರವರೆಗೆ ಜರುಗುತ್ತಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಭಾನುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.

ಜೀವನ ಆರೋಗ್ಯ ಸಂಸ್ಥೆಯ ಜೀವನ ರಕ್ತ ಕೇಂದ್ರದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ನಾಲ್ವರು ಯುವತಿಯರೂ ಸೇರಿದಂತೆ ಒಟ್ಟು 28 ಜನ ರಕ್ತದಾನ ಮಾಡಿದರು. ಒಬ್ಬ ಯುವತಿ, ಒಬ್ಬ ಯುವಕ ಒ ನೆಗೆಟಿವ್ ರಕ್ತ ನೀಡಿದ್ದು ಶಿಬಿರದ ವಿಶೇಷವಾಗಿತ್ತು.

ರೇಖಾ ನಡುವಿನಮನಿ, ವೀಣಾ ನಾಟಿಕಾರ, ಶ್ರೀಲಕ್ಷ್ಮೀ ಅನಗವಾಡಿ ರಕ್ತ ಸಂಗ್ರಹಿಸುವ ಕರ್ತವ್ಯ ನಿರ್ವಹಿಸಿದರು. ರಾಜು ಮೈಗೂರ, ರುದ್ರಸ್ವಾಮಿಮಠ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು. ಓಲೇಮಠದ ಆನಂದ ದೇವರು ಶ್ರೀಗಳು ಶಿಬಿರಕ್ಕೆ ಚಾಲನೆ ನೀಡಿದರು.

ರಕ್ತದಾನ ಶಿಬಿರ ಇನ್ನೂ ಎರಡು ದಿನಗಳವರೆಗೆ ಮುಂದುವರಿಯಲಿದೆ. ಸಿದ್ದಯ್ಯ ಕಲ್ಕತ್ತಿಮಠ, ಬಸವರಾಜ ಬಳಗಾರ, ಸದಾನಂದ ಬಾಗೇವಾಡಿ, ಮಲ್ಲು ಮುದಕನ್ನವರ, ಶಿವಾನಂದ ಕೊಣ್ಣೂರ, ಶಿವಾನಂದ ಕಲ್ಯಾಣಿ, ಮರನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net