ರಕ್ತದಾನ ಶಿಬಿರ ನಾಳೆ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ರಕ್ತ ದಾನಿಗಳ ದಿನ ನಿಮಿತ್ತ ಶಿವಕೃಪಾ ಟ್ರಸ್ಟ್​ ಹಾಗೂ ಹುಬ್ಬಳ್ಳಿಯ ರಾಷ್ಟ್ರೊತ್ಥಾನ ರಕ್ತ ನಿಧಿ ಕೇಂದ್ರದ ವತಿಯಿಂದ ನಗರದಲ್ಲಿ ಜೂ. 16ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಟ್ರಸ್ಟ್​ ಖಜಾಂಚಿ ರವಿ ಕಾಮತ್​ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರದ ಆದರ್ಶ ಬಾಲಕಿಯರ ಶಾಲೆಯ ಸಭಾಭವನದಲ್ಲಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. 120ಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ ಟ್ರಸ್ಟ್​ ಪದಾಧಿಕಾರಿಗಳನ್ನು ಸಂಪಕಿರ್ಸಬಹುದು ಎಂದರು.
ಟ್ರಸ್ಟ್​ ಅಧ್ಯಕ್ಷ ಅಮರ ಟಿಕಾರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net