

ಕುರುಗೋಡು: ಮಹಾ ಭಾರತದಲ್ಲಿ ಶ್ರೀ ಕೃಷ್ಣ ಅರ್ಜುನಗೆ ಹೇಳಿದ ಸಾರಾಂಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಆಚರಣೆಯಲ್ಲಿ ಬುಧವಾರ ಮಾತನಾಡಿದರು. ಭಗವಂತ ಶ್ರೀಕೃಷ್ಣನ ಗೀತೋಪದೇಶವನ್ನು ಜನರು ತಮ್ಮ ಜಂಜಾಟದ ಬದುಕಿನಲ್ಲಿ ಅಳವಡಿಸಿಕೊಂಡರೇ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಸರಳವಾಗಿ ಜೀವನ ನಡೆಸಬಹುದು ಎಂದರು.
ಪಟ್ಟಣದ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೃಷ್ಣನ ಮೂರ್ತಿಗೆ ವಿಶೇಷ ಹೂ ಅಲಂಕಾರ ಹಾಗೂ ಅಭಿಷೇಕ ಮಾಡಲಾಗಿತ್ತು. ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಯಾದವ ಸಮಾಜವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೂರಾರು ಜನರು ರಕ್ತದಾನ ಮಾಡಿದರು.