ಅ.03 ರಂದು ರಕ್ತದಾನ ಶಿಬಿರ- ವಿಜಯಕುಮಾರ ಮಟಮಾರಿ

VIJAYA KUMAR
VIJAYA KUMAR
Published on

 ರಾಯಚೂರು ದಿ. ವಿಜಯರೆಡ್ಡಿ ಸ್ಮರಣಾರ್ಥ ನಾಲ್ಕನೇ ವರ್ಷ ಪುಣ್ಯತಿಥಿ ನಿಮಿತ್ತ ಅ.03 ರಂದು ರಕ್ತದಾನ ಶಿಬಿರವನ್ನು ನಗರದ ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಿಟಿ 11 ಕ್ಲಬ್‌ನ ಕಾರ್ಯದರ್ಶಿ ವಿಜಯಕುಮಾರ ಮಟಮಾರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಟಿ 11ಕ್ರಿಕೆಟ್ ಕ್ಲಬ್, ಎಸಿಎಬಿ ಕಾನೂನು ಮಹಾವಿದ್ಯಾಲಯ, ವೀರ ಸಾರ್ವಕರ್ ಅಸೋಸಿಯೇಷನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಹಯೊ ಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಪ್ರಭಾರಿ ಅಧ್ಯಕ್ಷ ಡಾ.ಸಾಜೀದ ಸಮೀರ್, ತಾರಾನಾಥ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪವನಕುಮಾರ ಸುಖಾಣಿ, ರವಿ ಬೋಸರಾಜ, ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಎಸಿಎಬಿ ಕಾನೂನು ಮಹಾವಿದ್ಯಾಲಯದ ಕಾರ್ಯದರ್ಶಿ ನಂದಾಪುರು ಶ್ರೀನಿವಾಸ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಜಯಕುಮಾರ ಪಾಟೀಲ್ ಶಾವಂತಗೇರಾ, ಮೃತ್ಯುಂಜಯ ದಾಸನೂರು ಸೇರಿ ಅನೇಕರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಟಿ 11ಕ್ಲಬ್ ಅಧ್ಯಕ್ಷ ಶರಣರೆಡ್ಡಿ ವಹಿಸಲಿದ್ದಾರೆ. ನಗರದ ಯುವಕ, ಯುವತಿರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅತಾವುಲ್ಲಾ ವಕೀಲ, ವೆಂಕಟರೆಡ್ಡಿ, ಸಂಜೀವನಾಯಕ, ಜಯಕುಮಾರ, ಸಿದ್ದು,ಭರತ ಕುಮಾರ ರೆಡ್ಡಿ, ರವಿರಾಜ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net