

ಮಂಡ್ಯ: ಇಲ್ಲಿನ ಶಂಕರನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಯುವಕರು 77 ರಕ್ತ ಸಂಗ್ರಹಿಸಿದರು.
ಶಂಕರನಗರ ಗೆಳೆಯರ ಬಳಗ ಹಾಗೂ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ್ದ 5ನೇ ವರ್ಷ ಪುಷ್ಪಮಂಟಪೋತ್ಸವ ಅಂಗವಾಗಿ ನಡೆದ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ವಿಶೇಷವೆಂದರೆ ಮುಸ್ಲಿಂ ಸಮುದಾಯದ ಯುವಕರು ಕೂಡ ರಕ್ತದಾನ ಮಾಡುವ ಮೂಲಕ ಸೌಹಾರ್ಧತೆ ಮೆರೆದರು. ಬಳಿಕ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು. ರಕ್ತದಾನ ಮಾಡಿದ ಯುವಕರಿಗೆ ಶಾಸಕ ರವಿಕುಮಾರ್ ಗಣಿಗ ಪ್ರಮಾಣಪತ್ರ ವಿತರಿಸಿದರು.
ಪ್ರತಿಷ್ಠಾನದ ವ್ಯವಸ್ಥಾಪಕ ರಾಹುಲ್, ಶ್ರೀನಿವಾಸ್ ಸ್ಮರಣಾರ್ಥ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ನಡೆದಿತ್ತು. ಆದರೆ ಇಲ್ಲಿ ಮುಸ್ಲಿಂ ಯುವಕರು ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ ಎಂದರು.
ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಮಿಮ್ಸ್ ರಕ್ತನಿಧಿ ಕೇಂದ್ರ ಮಹಮದ್ ರಫೀಕ್, ರಾಜು, ಶಂಕರನಗರ ಗೆಳೆಯರ ಬಳಗ ಪ್ರಮೋದ್, ಅಭಿ, ಮಿತಿಲ್, ಲಕ್ಕನ್, ತೇಜಸ್, ಶ್ರೀನಿವಾಸ್, ಶಿವರಾಜ್, ಧನುಷ್, ಮನೀಷ್, ಇಮ್ರಾನ್, ಹುಸೇನ್, ಆಕಾಶ್, ಚಿರಂಜೀವಿ ಇತರರಿದ್ದರು.