

ಮಂಡ್ಯ: ಸಾಧಕ ಮಕ್ಕಳ ಹೆಸರಿಂದ ಗುರುತಿಸುವಂತಾದರೆ ಹೆತ್ತವರಿಗೆ ದೊಡ್ಡ ಗೌರವ ಸಿಕ್ಕಂತಾಗುತ್ತದೆ ಎಂದು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಮಂಗಲ ಗ್ರಾಮದ ರಾಜ್ಯ ಯುವ ಪ್ರಶಸ್ತಿಯ ಪುರಸ್ಕೃತ ಎಂ.ಸಿ.ಲಂಕೇಶ್ ಅವರ ತಾಯಿ ಮಹದೇವಮ್ಮ ಸ್ಮರಣಾರ್ಥ ಅಂಗವಾಗಿ ನೆಲದನಿ ಬಳ ಮಂಗಲ ಮತ್ತು ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಮತ್ತು ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಲ ಗ್ರಾಮ ಸಾಕಷ್ಟು ಸಾಧಕರು ಮತ್ತು ಸುಧಾರಕರನ್ನು ನಾಡಿಗೆ ಕೊಟ್ಟಿದೆ. ಸೇವಾ ಕಾರ್ಯಗಳ ಮೂಲಕ ಗ್ರಾಮಕ್ಕೆ ದೊಡ್ಡ ಕೀರ್ತಿ, ಹೆಸರರನ್ನು ತಂದುಕೊಟ್ಟಿದ್ದಾರೆ ಎಂದರು.
ಅಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಇದೆ. ಅದೇ ರೀತಿ ಸಸ್ಯ ಸಂಪತ್ತು ಹೆಚ್ಚಬೇಕಿದೆ. ಆದ್ದರಿಂದ ಇಂತಹ ಸ್ಮರಣೆ ಕಾರ್ಯಕ್ರಮದಲ್ಲಿ ಸೇವಾ ಚಟುವಟಿಕೆಗಳ ಮೂಲಕ ಪ್ರಕೃತಿಗೆ ಪೂರಕವಾಗಿರುವುದು ಮಾದರಿಯಾಗಿದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನೆಲದನಿ ಬಳದ ಗೌರವಾಧ್ಯಕ್ಷೆ ರುಕ್ಮಿಣಿ ಶಂಕರೇಗೌಡ, ಇಂಜನಿಯರ್ ಕೆಂಪರಾಜು, ಕೋಮಲ್‌ಕುಮಾರ್, ಕುಮಾರ್‌ಗೌಡ, ಮಹದೇವು ಇತರರಿದ್ದರು. ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಗಾಯಕ ಶಿವಾರ ಉಮೇಶ್ ಮತ್ತು ತಂಡ ಗೀತನಮನ ಸಮರ್ಪಿಸಿದರು.