ಜಗತ್ತಿನಲ್ಲಿ ರಕ್ತಕ್ಕೆ ಪರ್ಯಾಯ ಪದಾರ್ಥಗಳಿಲ್ಲ

UDP-29-13-BloodCamp
Published on

ಮೂಳೆತಜ್ಞ ಡಾ.ಶರತ್​ ರಾವ್​ ಹೇಳಿಕೆ

ಮಣಿಪಾಲದಲ್ಲಿ ಶಿಬಿರ ಉದ್ಘಾಟನೆ

ಉಡುಪಿ: ಮಾನವನ ರಕ್ತದ ಒಂದೊಂದು ಹನಿಯೂ ಅತ್ಯಂತ ಅಮೂಲ್ಯ. ಜಗತ್ತಿನಲ್ಲಿ ಇದಕ್ಕೆ ಪರ್ಯಾಯವಾದ ಯಾವುದೇ ಪದಾರ್ಥಗಳು ಇದುವರೆಗೂ ಅನ್ವೇಷಣೆ ಆಗಿಲ್ಲ. ಹೀಗಾಗಿ ಸ್ವಯಂ ಪ್ರೇರಿತ ರಕ್ತದಾನವೇ ಪರಿಹಾರ ಎಂದು ಖ್ಯಾತ ಮೂಳೆತಜ್ಞ, ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ ಡಾ.ಶರತ್​ ರಾವ್​ ಅಭಿಮತ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಗ್ಯಾರೇಜ್​ ಮಾಲಕರ ಸಂಘದ ಆಶ್ರಯದಲ್ಲಿ ಡಾ.ಟಿಎಂಎ ಪೈ ಪಾಲಿಟೆಕ್ನಿಕ್​ ಮಣಿಪಾಲ, ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರ, ಕೆಎಂಸಿ ಆಸ್ಪತ್ರೆ ಮಣಿಪಾಲ, ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ, ಅಭಯ ಹಸ್ತ ಚಾರಿಟೇಬಲ್​ ಟ್ರಸ್ಟ್​ ಸಹಭಾಗಿತ್ವದಲ್ಲಿ ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ, ಹೃದಯ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ರೋಷನ್​ ಕರ್ಕಡ ಕಾಪು ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಪ್ರಭಾಕರ್​ ಕೆ., ಗೌರವ ಸಲಹೆಗಾರರಾದ ಯಾದವ್​ ಶೆಟ್ಟಿಗಾರ್​, ಜಯ ಸುವರ್ಣ, ಉದಯ್​ ಕಿರಣ್​, ಉಪಾಧ್ಯಕ್ಷರಾಧ ರಾಜೇಶ್​ ಜತ್ತನ್ನ, ವಿನಯ್​ ಕುಮಾರ್​ ಕಲ್ಮಾಡಿ, ಕಾಲೇಜಿನ ಪ್ರಾಂಶುಪಾಲ ಡಾ.ಕಾಂತರಾಜ್​ ಎ.ಎನ್​., ತರಬೇತಿ ಕೇಂದ್ರದ ರಿಜಿಸ್ಟ್ರಾರ್​ ಡಾ.ಆಂಜಯ್ಯ, ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ. ಶಮಿ ಶಾಸ್ತ್ರಿ, ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್​ ಮ್ಯಾನೇಜರ್​ ಮೋಹನ್​ ಶೆಟ್ಟಿ, ಭಾರತೀಯ ಅಂಚೆ ಇಲಾಖೆಯ ಅಧಿಕಾರಿ ಶಂಕರ್​ ಲಮಾಣಿ, ಅಭಯ ಹಸ್ತದ ಅಧ್ಯಕ್ಷ ಸತೀಶ್​ ಸಾಲಿಯಾನ್​, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್​ ಮಾಲಕರ ಸಂಘದ ಅಧ್ಯಕ್ಷ ಕೇಶವ, ಮಾಜಿ ಚೇರ್ಮನ್​ ಪುಂಡಲೀಕ ಸುವರ್ಣ ಇತರರು ಹಾಜರಿದ್ದರು.

ವಿನಯ್​ಕುಮಾರ್​ ಸ್ವಾಗತಿಸಿದರು. ಸಂತೋಷಕುಮಾರ್​ ವಂದಿಸಿದರು. ಮಂಜುನಾಥ್​ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net