16ರಂದು ಸೌತಡ್ಕದಲ್ಲಿ ರಕ್ತದಾನ ಶಿಬಿರ

blood camp 1
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸೇವಾಭಾರತಿ ಸಂಸ್ಥೆ 20 ವರ್ಷಗಳ ಸಾರ್ಥಕ ಸೇವೆ ಪೂರೈಸಿ 21ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಮಂಗಳೂರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಕಾರದಲ್ಲಿ ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ, ವೀರಕೇಸರಿ ಅನಾರು ಪಟ್ರಮೆ ಕೇಸರಿ ಗೆಳೆಯರ ಬಳಗ, ಉಜಿರೆ ಕೊಕ್ಕಡ ಹವ್ಯಕ ವಲಯ ಸಹಭಾಗಿತ್ವದಲ್ಲಿ ಸಾಧನ ಸಲಕರಣೆಗಳ ವಿತರಣೆ ಸಾಧಕರಿಗೆ ಗೌರವ ಸಮರ್ಪಣೆ, ನೂತನ ಟ್ರಸ್ಟಿಗಳ ಸೇರ್ಪಡೆ, ರಕ್ತದಾನ ಶಿಬಿರ ಮಾ.16ರಂದು ಬೆಳಗ್ಗೆ 11 ಗಂಟೆಗೆ ಸೇವಾಧಾಮ ಪುನಶ್ವೇತನ ಕೇಂದ್ರ ಸೌತಡ್ಕದಲ್ಲಿ ನಡೆಯಲಿದೆ.

ಕೊಕ್ಕಡ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಉಜಿರೆ ಹವ್ಯಕ ವಲಯ ಉಪಾಧ್ಯಕ್ಷ ಶಿವರಾಮ ಭಟ್ ಹಿತ್ತಿಲು, ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ ಅಧ್ಯಕ್ಷ ಕಿಶೋರ್ ಪೊಯ್ಯಳೆ, ಅನಾರು ಪಟ್ರಮೆ ವೀರಕೇಸರಿ ಅಧ್ಯಕ್ಷ ಮೋಹನ್ ಅಶ್ವತ್ತಡಿ, ಕೊಕ್ಕಡ ಕೇಸರಿ ಗೆಳೆಯರ ಬಳಗ ಅಧ್ಯಕ್ಷ ಶರತ್ ಕೊಕ್ಕಡ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಪ್ರವೀಣ್ ಕುಮಾರ್, ಸಂಸ್ಥೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.

20ನೇ ವಾರ್ಷಿಕ ಸಂಭ್ರಮವನ್ನು ಉಡುಪಿ ರಾ.ಸ್ವ ಸಂಘ ಪ್ರಚಾರಕ ದಾ.ಮ.ರವೀಂದ್ರ ಜೇಷ್ಠ ಉದ್ಘಾಟಿಸಲಿದ್ದಾರೆ.

ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ, ಬೆಳ್ತಂಗಡಿ ಸಮಾಜ ಸೇವಕ ಕಿರಣ್ ಚಂದ್ರ ಡಿ.ಪುಷ್ಪಗಿರಿ, ಗುರುವಾಯನಕರೆ ಎಕ್ಸೆಲ್ ಪದವಿಪೂರ್ವ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಬಿ.ಜೈನ್, ಉಡುಪಿ ಭಾರತ ವಿಕಾಸ ಪರಿಷತ್ ಭಾರ್ಗವ ಶಾಖೆ ಸಂಯೋಜಕರು, ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್, ಕನ್ಯಾಡಿ ಕೃಷಿಕ ಅರುಣ ಜೆ.ಎನ್.ರೆಬೆಲ್ಲೊ, ಉಡುಪಿ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಗುರುಪ್ರಕಾಶ್ ಶೆಟ್ಟಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್, ಸಂಸ್ಥೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.

ಉಚಿತ ಟೈಲರಿಂಗ್ ತರಬೇತಿ ಆಯೋಜನೆ

ಆರೋಗ್ಯಂ ಯೋಜನೆಯಡಿ ರಕ್ತದಾನ ಶಿಬಿರ, ರಿಯಾಯಿತಿ ದರದಲ್ಲಿ ಆಂಬುಲೆನ್ಸ್ ಸೇವೆ ನೀಡುತ್ತದೆ. ಸಬಲಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಆಯೋಜಿಸಲಾಗುತ್ತಿದೆ. ಸೇವಾಧಾಮ ಎಂಬ ಹೆಸರಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ 2018ರಲ್ಲಿ ಪುನಶ್ವೇತನ ಕೇಂದ್ರ ಪ್ರಾರಂಭಿಸಿ, ಪುನಶ್ವೇತನ ನೀಡುವ ಕಾರ್ಯ ನಮ್ಮ ಸಂಸ್ಥೆಯಿಂದ ಮುಂದುವರಿಯುತ್ತಿದೆ. ನಮ್ಮ ಸಂಸ್ಥೆ 2023-24ರಲ್ಲಿ 94 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, 40 ಮಂದಿ ದಿವ್ಯಾಂಗರನ್ನು ಪುನಶ್ಚೇತನಗೊಳಿಸಲಾಗಿದೆ. 81 ಮಂದಿಗೆ ಗಾಲಿಕುರ್ಚಿ, 20 ಮಂದಿಗೆ ಜೀವನೋಪಾಯ ಸೌಲಭ್ಯ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net