ವಿಶ್ವ ಭೂ ದಿನದ ಅಂಗವಾಗಿಮೈಸೂರಿನಲ್ಲಿ ರಕ್ತದಾನ ಶಿಬಿರ

14
Published on

ಮೈಸೂರು: ಜೀವ ಉಳಿಸಲು ರಕ್ತ ಬೇಕಿದೆ. ಆದರೆ ಜಾತಿ, ಧರ್ಮ ಎಂದು ದ್ವೇಷ ಬಿತ್ತುತ್ತಿರುವ ದಿನಗಳಲ್ಲಿ ರಕ್ತದಾನಕ್ಕೆ ಯುವಕರು ಮುಂದೆ ಬರುವ ಮೂಲಕ ಸಾಮರಸ್ಯ ಮೆರೆದಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.

ಕನ್ನಡ ಕ್ರೈಸ್ತರ ರಕ್ಷಣಾ ವೇದಿಕೆಯಿಂದ ಜೆ.ಪಿನಗರದ ಎನ್‌ಎಸ್‌ಡಿ ಶಾಲೆಯಲ್ಲಿ ವಿಶ್ವ ಭೂ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಈ ಕಾಲಘಟ್ಟದಲ್ಲಿ ಅಷ್ಟೇ ಪ್ರಮಾಣದ ಸಮಸ್ಯೆಗಳನ್ನು ಎದುರಿಸಬೇಕಾಗದ ಅನಿವಾರ್ಯತೆ ನಾಗರಿಕ ಸಮಾಜದ ಮುಂದಿದೆ. ಹೆಚ್ಚು ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶದಿಂದ ಪರಿಸರದ ಅಸಮತೋಲನ ಉಂಟಾಗುತ್ತಿದೆ. ಪರಿಸರ ವಿನಾಶ, ಕಲುಷಿತದಿಂದ ನಾನಾ ಬಗೆಯ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈ ವೇಳೆ ರಕ್ತದ ಸಮಸ್ಯೆಯೂ ಸಾಕಷ್ಟು ಸಂದರ್ಭದಲ್ಲಿ ತಲೆ ದೋರುತ್ತಿದೆ. ಹಾಗಾಗಿ ನಮ್ಮ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ಸಾವಿರಾರು ಬಡ ರೋಗಿಗಳ ಜೀವ ಉಳಿಸುವ ಸದುದ್ದೇಶದಿಂದ ರಕ್ತದಾನ ಮಾಡುವ ಮೂಲಕ ನಾಡಿಗೆ, ದೇಶಕ್ಕೆ ಮಾನವೀಯ ಸಂದೇಶವನ್ನು ನೀಡುತ್ತಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜದ ಶಾಂತಿ ನೆಮ್ಮದಿ ಕದಡುವ ಕೆಟ್ಟ ಕೆಲಸಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೊಂಚು ಹಾಕುತ್ತಿವೆ. ಅದಕ್ಕೆ ಆಸ್ಪದ ಕೊಡದೆ ನಾವೆಲ್ಲ ಭಾರತ ಮಾತೆಯ ಮಕ್ಕಳಾದ ಬದುಕಬೇಕಿದೆ ಎಂದು ಹೇಳಿದರು.

ಸಂಘಟಕರಾದ ಜೋಸೆಫ್ ಸ್ಟೀಫನ್, ಟೋನಿ ಪಿಯರ್ಸೆನ್, ಸುಜಿತ್‌ಕುಮಾರ್, ಅಂತೋನಿ ದಾಸ್, ನಾರಾಯಣ್, ಮೆಸೇಕ್, ರವಿ, ಮನೋಜ್, ಸಿಂಗರ್ ಬರ್ನಾಡ್, ರೇಜಿ ಪಾರ್ಲ, ರವಿರಾಜ್, ಪ್ಲಾಸ್ಟರ್ ಜಯಕುಮಾರ್ ದುಬಾಲ, ಜಗನ್ನಾಥ ಭೋವಿ, ಆಶ್ರಯ ಸಮಿತಿ ಸದಸ್ಯರಾದ ಸೋಮು ಕುರುಬಾರಳ್ಳಿ, ಗುಣಶೇಖರ್, ಈ ವೇಳೆ ಕೃಷ್ಣರಾಜೇಂದ್ರ ಆಸ್ಪತ್ರೆಯ ರಕ್ತನಿಧಿ ಮುಖ್ಯಸ್ಥರಾದ ಡಾ.ಕುಸುಮಾ, ಡಾ.ಅಮ್ಮು, ಶುಶ್ರೂಷಕರಾದ ಸವಿತಾ, ತಾರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net