

ಕಾಸರಗೋಡು: ಮಜೀರ್ಪಳ್ಳ ಅಗ್ನಿ ಬ್ರಿಗೇಡ್, ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ರಕ್ತದಾನ ಶಿಬಿರ ಕೋಳ್ಯೂರು ಆಡಿಟೋರಿಯಂನಲ್ಲಿ ಜರುಗಿತು.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಅಧ್ಯಕ್ಷ ಸೋಮಪ್ಪ ಪಿ. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರ್, ಚಲನಚಿತ್ರ ನಟ ಅರವಿಂದ ಬೋಳಾರ್ ಮುಖ್ಯ ಅತಿಥಿಯಾಗಿದ್ದರು.
ಕೋಳ್ಯೂರು ಪದವು ಅಂಗನವಾಡಿ ಸಹಾಯಕಿ ಲಲಿತಾ, ಕೊಡ್ಲಮೊಗರು ಶ್ರೀ ವಾಣಿ ವಿಜಯ ಪ್ರೌಢಶಾಲೆ ನಿವೃತ್ತ ಮುಖಶಿಕ್ಷಕ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್‌ನ ಲಾಂಛನ ಬಿಡುಗಡೆಗೊಳಿಸಲಾಯಿತು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಸದಸ್ಯರು, ಊರವರು ರಕ್ತದಾನ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಮಿಂಜಾ ಗ್ರಾಪಂ ಅಧ್ಯಕ್ಷೆ ಸುಂದರಿ ಶೆಟ್ಟಿ, ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್., ಮಿಂಜಾ ಗ್ರಾಪಂ ಸ್ಥಾಯಿ ಸಮಿತಿ ಚೇರ್ಮನ್ ಬಾಬು ಕೂಳೂರು, ಮಿಂಜಾ ಗ್ರಾಪಂ ಸದಸ್ಯ ನಾರಾಯಣ ತುಂಗಾ ಉಪಸ್ಥಿತರಿದ್ದರು. ಮಜೀರ್ಪಳ್ಳ ಅಗ್ನಿ ಬ್ರಿಗೇಡ್ ಕೋಶಾಧಿಕಾರಿ ಮನೋಜ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಮನ್ಮಿತ್ ವಂದಿಸಿದರು.