

ಹುಬ್ಬಳ್ಳಿ: ನಗರದ ಕಿಮ್ಸ್ ಆಡಳಿತ ಭವನದಲ್ಲಿ ಸೆ. 15ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ, ಶುಶ್ರೂಷಾಧಿಕಾರಿಗಳು, ಸಿ ಮತ್ತು ಡಿ ಗ್ರುಪ್ ನೌಕರರು, ಎಂಬಿಬಿಎಸ್, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಇತರರು ರಕ್ತದಾನ ಮಾಡಲಿದ್ದಾರೆ ಎಂದು ಕಿಮ್ಸ್ ಪ್ರಕಟಣೆ ತಿಳಿಸಿದೆ.