ಕಲಬುರಗಿಯಲ್ಲಿ ನೂರಾರು ಬಸವ ಭಕ್ತರಿಂದ ರಕ್ತದಾನ

IMG-20240510-WA0033
Published on

ಕಲಬುರಗಿ: ವಿಶ್ವಗುರು ಬಸವ ಜಯಂತಿ ನಿಮಿತ್ತ ನಗರ ಜಗತ್ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.

ನೂರಕ್ಕೂ ಹೆಚ್ಚು ಜನರು ರಕ್ತದಾನ ಮಾಡಿ, ಮಾನವೀಯತೆ ಮೆರೆದರು. ಶ್ರೀಧರ ನಾಗನಹಳ್ಳಿ ನೇತೃತ್ವದಲ್ಲಿ ಹಮ್ಮಿಕೊಂಡ ಶಿಬಿರಕ್ಕೆ ಜಯಂತಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ್ ಸರಡಗಿ ಚಾಲನೆ ನೀಡಿದರು.

ರಕ್ತದಾನ ಮಾಡಿದವರಿಗೆ ಸ್ಥಳದಲ್ಲಿ ಜ್ಯೂಸ್ ವ್ಯವಸ್ಥೆ ಮಾಡಲಾಗಿತ್ತು.

ಶ್ರೀಧರ ನಾಗನಹಳ್ಳಿ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಯುವಕರಾದ ದಯಾನಂದ ಪಾಟೀಲ್, ಗುರುರಾಜ ಅಂಬಾಡಿ, ಅಭಿಷೇಕ ನಾಗನಹಳ್ಳಿ, ಪ್ರಜ್ವಲ್ ಕೊರಳ್ಳಿ, ಶ್ರೀಕಾಂತ್ ಬಿರಾದಾರ, ವಿಜಯ ಪುರಾಣಿಕ್, ಕಲ್ಯಾಣರಾವ ಪಾಟೀಲ್, ಸಚಿನ್ ಭತಗುಣಕಿ, ಮಹೇಶ್ಚಂದ್ರ ಪಾಟೀಲ್, ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net