

ಗುಂಡ್ಲುಪೇಟೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ, ಏಡ್ಸ್, ಟಿಬಿ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
30ಕ್ಕಿಂತ ಅಧಿಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ರಕ್ತದಾನ ಮಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ, ಡಾ.ತ್ರಿವೇಣಿ, ಡಾ.ಜಾಫರ್ ಸಲ್ಮಾನ್, ಪ್ರಾಂಶುಪಾಲರಾದ ಪವಿತ್ರಾ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ.ಶಾಲಿನಿ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಚಾಲಕರಾದ ಕವಿತಾ ಮತ್ತು ಶಿವಸ್ವಾಮಿ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಚಾಲಕರಾದ ತುಳಸಿ ರಾಮ್, ಸಂಯುಕ್ತ ಸಿಂಗ್ ಇತರರಿದ್ದರು.