

ರಾಯಚೂರು ನಗರದ ಎಸ್‌ಸಿಎಬಿ ಕಾನೂನು ಮಹಾವಿದ್ಯಾ ಲಯದ ಆವರಣದಲ್ಲಿ ಭಾನುವಾರ ದಿ.ವಿಜಯರೆಡ್ಡಿ ಅವರ 4ನೇ ಪುಣ್ಯತಿಥಿಯ ಸ್ಮರಣಾರ್ಥವಾಗಿ ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್, ಎಸ್ಸಿಎಬಿ ಕಾನೂನು ಮಹಾ ವಿದ್ಯಾಲಯ, ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್ ಮತ್ತು ಭಾರತೀಯ ರೆಡ್ ಕ್ರಾಸ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಪ್ರಭಾರಿ ಅಧ್ಯಕ್ಷ ಸಾಜೀದ್ ಸಮೀರ ಉದ್ಘಾಟಿಸಿ ಮಾತನಾಡಿದರು, ದಿ.ವಿಜಯರೆಡ್ಡಿ ಅವರ 4ನೇ ಪುಣ್ಯತಿಥಿ ಅಂಗವಾಗಿ ರಕ್ತದಾನ ಮಾಡುವ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ, ಅವರು ಕ್ರಿಕೆಟ್ ಪಟುವಾಗಿ ಮಾಡಿದ ಸಾಧನೆ ಎಲ್ಲರಿಗೂ ಮಾರ್ಗದರ್ಶವಾಗಿದ್ದರು, ಇದೀಗ ಅವರ ನೆನಪಿಗಾಗಿ ಒಳ್ಳೆಯ ಕಾರ್ಯ ಮುಂದುವರೆಸಿ ಕೊಂಡು ಹೋಗುತ್ತಿರುವುದು ಸಂತೋಷ ದಾಯಕವಾಗಿದೆ ಎಂದರು.
ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ ಮಾತನಾಡಿ, ವಿಜಯರೆಡ್ಡಿ ಅವರ ಒಳ್ಳಯ ಕ್ರೀಡಾಪಟುವಾಗಿ ಮಾಡಿದ ಸಾಧನೆ, ಸ್ಫೂರ್ತಿ ಇಂದು ಅವರ ತಂದೆ ಮತ್ತು ಸ್ನೇಹಿತರು ಕೂಡಿಕೊಂಡು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದರು. ವಿಜಯರೆಡ್ಡಿ ಅವರ ತಂದೆ ಕ್ರಿಕೆಟ್ ತರಬೇತುದಾರಾಗಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ, ಇವರ ಸಿಟಿ ಇಲೆವನ್ ಕ್ಲಬ್ ಮೂಲಕ ಸಾಕಷ್ಟು ಜನರು ತರಬೇತಿ ಪಡೆದು ರಾಜ್ಯ ಮತ್ತು ವಲಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಪ್ರತಿದಿನ ಎಲ್‌ವಿಡಿ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಗೆ ಮೈದಾನಕ್ಕಾಗಿ ಅವಕಾಶ ಮಾಡಿ ಕೊಟ್ಟ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರಿಗೆ ಸಾಧನೆಯ ಗೌರವ ಸಲ್ಲುತ್ತದೆ. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸುವ ಜೊತೆಗೆ ರಕ್ತದಾನ ಮಾಡಿದವರ ಆರೋಗ್ಯವು ಉತ್ತಮವಾಗಿರುತ್ತದೆ ಜೊತೆಗೆ ರಕ್ತ ವೃದ್ಧಿಯಾಗುತ್ತದೆ, ಸಾಕಷ್ಟು ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ ವಿಜಯಕುಮಾರ ಪಾಟೀಲ್ ಶಾವಂತಗೇರಾ, ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ನಂದಾಪುರ ಶ್ರೀನಿವಾಸ, ಕಾರ್ಯದರ್ಶಿ ಮೃತ್ಯುಂಜಯ ದ್ಯಾಸನೂರು, ಸಂಸ್ಥೆಯ ಅಧ್ಯಕ್ಷ ಶರಣ್ ರೆಡ್ಡಿ, ವಿಜಯಕುಮಾರ,ವೆಂಕಟರೆಡ್ಡಿ,ಎಂ.ವಿಜಯಕುಮಾರ, ಸಂಜೀವ ನಾಯಕ,ಪ್ರಾಚಾರ್ಯ ಪದ್ಮಾ ಜೆ.ಸೇರಿದಂತೆ ಅನೇಕರು ಇದ್ದರು.