ಶಾರದಾ ವೈದ್ಯಕೀಯ ಕಾಲೇಜಿನಲ್ಲಿ ರಕ್ತದಾನ ಶಿಬಿರ

blood camp
Published on

ಉಳ್ಳಾಲ: ತಲಪಾಡಿ ಶಾರದಾ ಯೋಗ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಎನ್‌ಎಸ್‌ಎಸ್ ಘಟಕ ಮತ್ತು ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಪ್ರಾದೇಶಿಕ ರಕ್ತದಾನ ಕೇಂದ್ರ ಮಂಗಳೂರು ಇವುಗಳ ಸಹಯೋಗದಲ್ಲಿ ಶನಿವಾರ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ 97 ಮಂದಿ ರಕ್ತದಾನದಲ್ಲಿ ಭಾಗವಹಿಸಿದ್ದರು. ಶಾರದಾ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ರಕ್ತದಾನಿಗಳನ್ನು ಶ್ಲಾಘಿಸಿದರು. ಸಂಸ್ಥೆ ನಿರ್ದೇಶಕ ಸಮೀರ್ ಪುರಾಣಿಕ್, ಪ್ರೀತಿ ಪುರಾಣಿಕ್, ಪ್ರವೇಶಾಧಿಕಾರಿ ವಿವೇಕ್ ತಂತ್ರಿ ಸ್ವತಃ ರಕ್ತದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ನಂದೀಶ್ ಎನ್.ಎಸ್, ಉಪಪ್ರಾಂಶುಪಾಲೆ ಡಾ.ಲತಾಮಣಿ, ಎನ್‌ಎಸ್‌ಎಸ್ ಅಧಿಕಾರಿ ಡಾ.ಅನೂಪ್, ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ ಪಣಿಕ್ಕರ್, ವೆನ್ಲಾಕ್ ಆಸ್ಪತ್ರೆಯ ಅಂತೋನಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net