

ಹುಬ್ಬಳ್ಳಿ: ಖ್ಯಾತ ಉದ್ಯಮಿ ಮತ್ತು ಕೆಜೆಪಿ ಗ್ರೂಪ್ ಆಫ್ ಕಂಪನಿ ಮಾಲೀಕ ಡಾ. ಗಣೇಶ ಡಿ. ಶೇಟ್ ಅವರ 54ನೇ ಜನ್ಮ ದಿನ ನಿಮಿತ್ತ ಸಮೀಪದ ಅಮರಗೋಳದ ರಾಯಲ್ ರಿಟ್ಜ್‌ನಲ್ಲಿ ಸೋಮವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಬಹಳಷ್ಟು ಜನರು ರಕ್ತದಾನ ಮಾಡಿದರು. ಹುಬ್ಬಳ್ಳಿಯ ವೃದ್ಧಾಶ್ರಮ ಮತ್ತು ಬುದ್ಧಿಮಾಂಧ್ಯ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಸಂತೋಷ ಜಿ. ಶೇಟ್ ಅವರು ವಯೋವೃದ್ಧರಿಗೆ ಮತ್ತು ಬುದ್ಧಿಮಾಂಧ್ಯ ಮಕ್ಕಳಿಗೆ ಕೇಕ್ ಮತ್ತು ಹಣ್ಣು ವಿತರಣೆ ಮಾಡಿದರು.
ಕೆಜೆಪಿ ಗ್ರೂಪ್ ಆಫ್ ಕಂಪನಿ ಅಧೀನದಲ್ಲಿರುವ ರಾಯಲ್ ರಿಟ್ಜ್ ಎಂಡಿ ಶ್ರೀಗಂಧ ಶೇಟ್, ಕೆಜೆಪಿ ಜುವೆಲರ್ಸ್ ಎಂಡಿಗಳಾದ ಸಂತೋಷ ಶೇಟ್, ಸುರೇಖಾ ಶೇಟ್, ವಿದ್ಯಾ ಶೇಟ್, ಸತೀಶ ಕುರಡೇಕರ, ಸಂದೇಶ ರಾಯ್ಕರ್, ಬ್ರಹಿನ್ ಲುಯೀಸ್, ಮಂಜುರಾಮ ಶೆಟ್ಟಿ, ಪ್ರವೀಣ ಎಚ್., ರಾಘವೇಂದ್ರ ರೇವಣಕರ, ವಿನೋದ ಶೇಟ್, ಪ್ರಕಾಶ ನಾಯ್ಕ, ನವೀನ ಪವಾರ್, ಇತರರು ಇದ್ದರು.