

ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ರಾಷ್ಟ್ರೋತ್ಥಾನ ರಕ್ತ ಭಂಡಾರ ವತಿಯಿಂದ ಇತ್ತೀಚೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
400ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ 68ನೇ ಬಾರಿ ರಕ್ತದಾನ ಮಾಡಿದರು.
ಸ್ವರ್ಣ ಗ್ರೂಪ್ ಕಂಪನೀಸ್ ವ್ಯವಸ್ಥಾಪನ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ವೇಣುಗೋಪಾಲ ಆಚಾರ್, ಎ.ಸಿ. ಗೋಪಾಲ, ಸಂಜೀವ ಜೋಶಿ, ಕಿರಣ ಗಡ, ಜಯತೀರ್ಥ ಕಟ್ಟಿ, ರವಿ ನಾಯಕ, ಮನೋಹರ ಪರ್ವತಿ, ಶಂಕರ ಪಾಟೀಲ, ಸುನೀಲ ಗುಮಾಸ್ತೆ, ಲಕ್ಷ್ಮಣ ಕುಲಕರ್ಣಿ ಇತರರು ಇದ್ದರು.