

ಹುಬ್ಬಳ್ಳಿ : ಅಂತಾರಾಷ್ಟ್ರೀಯ ರಕ್ತದಾನಿಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಂವೇಧನಾ-2 ಅಭಿಯಾನದಡಿ ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಂದು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕ ಐ.ಬಿ. ಬಿರಾದಾರ, ಎನ್ಎಸ್ಎಸ್ ಸಂಯೋಜನಾಧಿಕಾರಿ ಮತ್ತು ವಿಶ್ವವಿದ್ಯಾಲಯದ ಅಭಿಯಂತರರ ವಿಭಾಗದ ಮುಖ್ಯಸ್ಥ ನಿರಂಜನ ಮಳಿಮಠ, ಆರ್.ಎಂ. ಕುಲಕಣಿರ್, ಕರಾಕಾವಿಯ ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀಲ ಬಾಗಡೆ, ಗಿರೀಶಗೌಡ ಪಾಟೀಲ, ಮೋಹನ ಆರ್., ಡಾ. ಪ್ರಶಾಂತ ಎಡ್ರಾಮಿಮಠ, ಶೋಭಾ ಹೂಗಾರ, ಹನುಮಂತ ತಳವಾರ ಮತ್ತು ರಾಷ್ಟ್ರೊತ್ತಾನ ರಕ್ತ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಕರಾಕಾವಿಯ ಕಾನೂನು ಶಾಲೆಯ ವಿದ್ಯಾಥಿರ್ಗಳು ಸೇರಿ ಅಂದಾಜು 1500 ಜನರು ಸ್ವಯಂ ಪ್ರೇರಣೆಯಿಂದ 173 ಯೂನಿಟ್ ರಕ್ತದಾನ ಮಾಡಿದರು.